ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಕಿರಣ ಸೋರಿ ಆತಂಕ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Airport-01

ನವದೆಹಲಿ, ಅ.9- ರಾಜಧಾನಿಯ ಇಂದಿರಾಗಾಂಧಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‍ನ ವೈದ್ಯಕೀಯ ಉಪಕರಣದಿಂದ ರೇಡಿಯೋ ವಿಕಿರಣ ಸೋರಿಕೆಯಾಗಿ ಇಡೀ ಪ್ರದೇಶದಲ್ಲಿ ಕೆಲ ಕಾಲ ಭಾರೀ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಐಜಿಐ ಏರ್‍ಪೋರ್ಟ್‍ನ ಟಿ-3 ಟರ್ಮಿನಲ್‍ನಲ್ಲಿ ರೇಡಿಯೋ ಆಕ್ವಿವ್ ಸೋರಿಕೆಯಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಅಣುಶಕ್ತಿ ನಿಯಂತ್ರಣ ಮಂಡಳಿ (ಎಇಆರ್‍ಬಿ) ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಸೋರಿಕೆ ತಡೆಗಟ್ಟಿ ದರು. ಏರ್‍ಫ್ರಾನ್ಸ್ ವಿಮಾನದಿಂದ ಬಂದ ವೈದ್ಯಕೀಯ ಉಪಕರಣವನ್ನು ಕಾರ್ಗೋ ಟರ್ಮಿನಲ್‍ನಲ್ಲಿರಿಸಲಾಗಿತ್ತು. ಇಂದು ಬೆಳಗ್ಗೆ 10.45ರಲ್ಲಿ ಆ ಸಾಧನದಿಂದ ಸೋರಿಕೆ ಕಂಡುಬಂದಿತು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಅತುಲ್‍ಗರ್ಗ್ ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ (ಎನ್‍ಡಿಎಂಎ) ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಇಡೀ ಪ್ರದೇಶವನ್ನು ಬಂದ್ ಮಾಡಿದರು.

ಈ ಟ್ರಕ್ ಟರ್ಮಿನಲ್ ಪ್ರಯಾಣಿಕರ ಪ್ರದೇಶದಿಂದ 1.5 ಕಿಮೀ ದೂರವಿರುವ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಮೇದಾಂತ ಆಸ್ಪತ್ರೆಯಿಂದ ವೈದ್ಯರನ್ನು ಸಹ ಸೇವೆಗೆ ಬಳಸಿಕೊಳ್ಳಲಾಗಿತ್ತು. ಸೋರಿಕೆಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ.

Facebook Comments

Sri Raghav

Admin