ಬಾಲಿವುಡ್ ತಾರೆಯರ ಪೈಕಿ ಭಾಯಿಜಾನ್ ಸಲ್ಮಾನ್ ಅತ್ಯಧಿಕ ತೆರಿಗೆ ಪಾವತಿದಾರ

ಈ ಸುದ್ದಿಯನ್ನು ಶೇರ್ ಮಾಡಿ

Being-Human-01

ಬಾಲಿವುಡ್ ತಾರೆಯರು ಮುಂಗಡ ತೆರಿಗೆ ಪಾವತಿಸಲು ಮೀನಾ-ಮೇಷ ಎಣಿಸುತ್ತಿರುವ ನಿದರ್ಶನಗಳ ನಡುವೆ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಭಿನ್ನ ರೀತಿಯಲ್ಲಿ ಸುದ್ದಿ ಮಾಡಿದ್ದಾರೆ.
ಅತ್ಯಧಿಕ ಮುಂಗಡ ತೆರಿಗೆ ಪಾವತಿಸಿದ ಟಾಪ್ ಟೆನ್ ತಾರೆಯರ ಪಟ್ಟಿಯಲ್ಲಿ ಸಲ್ಲು ಈಗ ಅಗ್ರಸ್ಥಾನದಲ್ಲಿದ್ದಾರೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಲ್ಲು ಮುಂಗಡವಾಗಿ ತೆರಿಗೆ ಪಾವತಿಸಿದ ಮೊತ್ತ 16 ಕೋಟಿ ರೂ.ಗಳು. ಕಳೆದ ವರ್ಷ 18 ಕೋಟಿ ರೂ. ತೆರಿಗೆ ಪಾವತಿಸಿ ಮೊದಲ ಸ್ಥಾನದಲ್ಲಿದ್ದ ಕಿಲಾಡಿ ಕುಮಾರ್ ಯಾನೆ ಅಕ್ಷಯ್ ಕುಮಾರ್ 11 ಕೋಟಿ ರೂ.ಗಳ ಟ್ಯಾಕ್ಸ್ ಪೇಯರ್ ಆಗಿ ಎರಡನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷದ ಟಾಪ್ 10 ಅತ್ಯಧಿಕ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಬಿ-ಟೌನ್ ಮೋಹಕ ನಟ ಹೃತಿಕ್ ರೋಷನ್ ಹೆಸರು ಇರಲಿಲ್ಲ. ಆದರೆ ಈ ವರ್ಷ ಅಕ್ಕಿ ಜೊತೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. 7.8 ಕೋಟಿ ರೂ.ಗಳ ಟ್ಯಾಕ್ಸ್ ಪಾವತಿಸಿರುವ ರಾಕ್‍ಸ್ಟಾರ್ ನಟ ರಣಬೀರ್ ಕಪೂರ್ ಮೂರನೇ ಸ್ಥಾನದಲ್ಲಿದ್ದಾರೆ.  ಅಚ್ಚರಿ ಸಂಗತಿ ಎಂದರೆ ಜನಪ್ರಿಯ ಹಾಸ್ಯ ನಟ ಕಪಿಲ್ ಶರ್ಮ, ಪರ್ಫೆಕ್ಷನಿಸ್ಟ್ ನಟ ಅಮೀರ್ ಖಾನ್‍ರನ್ನು (3.7 ಕೋಟಿ ರೂ.ಗಳು) ಹಿಂದಿಕ್ಕಿದ್ದಾರೆ. ಕಪಿಲ್ ಪಾವತಿಸಿರುವ ಮೊತ್ತ 6.06 ಕೋಟಿ ರೂ.ಗಳು. ಆದಾಗ್ಯೂ, ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್, ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ತೆರಿಗೆ ಪಾವತಿ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಬಹಿರಂಗಗೊಳಿಸಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin