ತಿರುಗೇಟು ನೀಡಿದ ಕಿವೀಸ್ : ಶತಕದತ್ತ ಮಾರ್ಟಿನ್ ಗುಪ್ಟಿಲ್ ದಾಪುಗಾಲು

ಈ ಸುದ್ದಿಯನ್ನು ಶೇರ್ ಮಾಡಿ

cricket

ಇಂದೋರ್,ಅ.10- ಮಾರ್ಟಿನ್ ಗುಪ್ಟಿಲ್ ಅಜೇಯ 59 ಹಾಗೂ ಟಾಮ್ ಲಾಥಮ್ 53 ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಪ್ರವಾಸಿ ತಂಡ ನ್ಯೂಜಿಲೆಂಡ್ ಭಾರತಕ್ಕೆ ತಿರುಗೇಟು ನೀಡಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ವೊಡ್ಡಿದ ಸವಾಲನ್ನು ಬೆನ್ನತ್ತಿದ ಕಿವೀಸ್ ಉತ್ತಮ ಆರಂಭ ಕಾಯ್ದುಕೊಂಡಿದೆ. ಬ್ಯಾಟಿಂಗ್ ಪಿಚ್‍ನಲ್ಲಿ ರನ್ ಹೊಳೆ ಹರಿಸಿದ ಅತಿಥೇಯರಂತೆ ಪ್ರವಾಸಿ ತಂಡ ಕೂಡ ಭರ್ಜರಿ ಆಟ ಆರಂಭಿಸಿದೆ. ನಿನ್ನೆ ವಿಕೆಟ್ ನಷ್ಟವಿಲ್ಲದೆ 28 ರನ್‍ಗಳಿಂದ ದಿನದಾಟ ಆರಂಭಿಸಿದ ಕಿವೀಸ್ ಆರಂಭಿಕ ಬ್ಯಾಟ್ಸ್‍ಮನ್‍ಗಳು ಭಾರತದ ಬೌಲರ್‍ಗಳಿಗೆ ತಿರುಗೇಟು ನೀಡಿದರು. ನಿನ್ನೆ ಆರಂಭಿಕ ಬ್ಯಾಟ್ಸ್‍ಮನ್‍ಗಳು ಅಜೇಯರಾಗಿ ಉಳಿದ ಜೋಡಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿ ತಂಡಕ್ಕೆ ನೆರವಾದರು.

ಗುಪ್ಟಿಲ್-ಲಾಥಮ್ ಶತಕ ಜೊತೆಯಾಟ: ಕಿವೀಸ್‍ನ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಮಾರ್ಟಿನ್ ಗುಪ್ಟಿಲ್ ಹಾಗೂ ಲಾಥಮ್ ಜೋಡಿಯು ಮೊದಲ ವಿಕೆಟ್ ಜೊತೆಯಾಟದಲ್ಲಿ 118 ರನ್ ದಾಖಲಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಭಾರತ ಬೌಲರ್‍ಗಳನ್ನು ಕಾಡಿ ಸೊಗಸಾದ ಆಟವಾಡಿದರು. ಜವಾಬ್ದಾರಿಯುತ ಆಟವಾಡಿದ ಲಾಥಮ್(53 ರನ್, 104 ಎಸೆತ, 7 ಬೌಂಡರಿ) ಅರ್ಧ ಶತತಕ ಗಳಿಸಿ ಅಶ್ವಿನ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ಔಟಾದರು. ಹೀಗಾಗಿ ಕಿವೀಸ್‍ನ ಮೊದಲನೇ ವಿಕೆಟ್ ಪತನವಾಗಿ ಭಾರತ ಸ್ವಲ್ಪ ನಿರಾಳವಾಯಿತು.

ಇತ್ತ ಸತತ ಎರಡು ಟೆಸ್ಟ್‍ನಲ್ಲಿ ಬ್ಯಾಟಿಂಗ್ ವೈಫಲ ಅನುಭವಿಸಿದ್ದ ಮಾರ್ಟಿನ್ ಗುಪ್ಟಿಲ್ ಫಾರ್ಮ್‍ಗೆ ಮರಳಿ ಅಜೇಯ ( 125 ಎಸೆತ, 8 ಬೌಂಡ್ರಿ, 2 ಸಿಕ್ಸರ್) 59 ರನ್ ಬಾರಿಸಿ ಶತಕದ ತವಕದಲ್ಲಿದ್ದಾರೆ. ಕಳೆದ ಟೆಸ್ಟ್‍ನಲ್ಲಿ ಗಾಯಗೊಂಡು ಹೊರಗುಳಿದಿದ್ದ ನಾಯಕ ವಿಲಿಯಮ್ಸನ್ 8 ರನ್ ಗಳಿಸಿ ಅಶ್ವಿನ್ ಬೌಲಿಂಗ್ ಬೋಲ್ಡ್ ಆದರು. ವಿರಾಮದ ವೇಳೆಗೆ ಕಿವೀಸ್ 44.4 ಓವರ್‍ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ. ಭಾರತ ಪರ ಆರ್.ಅಶ್ವಿನ್ ಎರಡು ವಿಕೆಟ್ ಗಳಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin