ಕಾರಿಗೆ ಬಸ್ ಡಿಕ್ಕಿ : ಬಾಲಕ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

accident

ಬೇಲೂರು, ಅ.10- ಬೇಲೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಕರಗಡ ಕೆರೆ ಏರಿ ಮೇಲೆ ಮುಂದಿರುವ ಓಮ್ನಿ ಕಾರನ್ನು ಹಿಂದಿಕ್ಕಲು ಹೋಗಿ ಎದುರಿನಿಂದ ಬಂದ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾವನ್ನಪ್ಪಿ , ದಂಪತಿ ಗಂಭೀರವಾಗಿ ಗಾಯಕೊಂಡಿರುವ ಘಟನೆ ನಡೆದಿದೆ.ಬಾಲಕ ದೀಕ್ಷಿತ್(3) ಸ್ಥಳದಲ್ಲೆ ಸಾವನಪ್ಪಿದ್ದು, ಅಶೋಕ್ ಮತ್ತು ಪತ್ನಿ ಪವಿತ್ರರ ಸ್ಥಿತಿ ಚಿಂತಾಜನಕವಾಗಿದೆ. ಇವರನ್ನು ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಘಟನೆಯ ವಿವರ:

ಆಯುದ ಪೂಜೆಗೆಂದು ಚಿಕ್ಕಮಗಳೂರಿನಿಂದ ಶಾಪಿಂಗ್ ಮುಗಿಸಿಕೊಂಡು ಬೇಲೂರಿಗೆ ತಮ್ಮ ಇಂಡಿಕಾ ಕಾರಿನಲ್ಲಿ ಅಶೋಕ್ ಮತ್ತು ಪತ್ನಿ ಪವಿತ್ರ ಮಗ ದೀಕ್ಷಿತ್‍ನೊಂದಿಗೆ ತೆರಳುತ್ತಿದ್ದಾಗ ತಾಲೂಕಿನ ಕರಗಡ ಕೆರೆ ಏರಿ ಮೇಲೆ ಸಂಜೆ 4.30ರ ಸಮಯದಲ್ಲಿ ಬೇರೊಂದು ವಾಹನವನ್ನು ಹಿಂದಿಕ್ಕಿ ವೇಗವಾಗಿ ಬಂದ ಕೆಎಸ್‍ಆರ್‍ಟಿಸಿ ಬಸ್ ಇವರಿದ್ದ ಇಂಡಿಕಾ ಕಾರ್‍ಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಹೋಗಿದೆ.
ಕಾರಿನಲ್ಲಿದ್ದ ದೀಕ್ಷಿತ್‍ನ ಸ್ಥಳದಲ್ಲೇ ಸಾವನ್ನಪ್ಪಿದ್ದು , ಅಶೋಕ್ ಮತ್ತು ಪತ್ನಿ ಪವಿತ್ರರಿಗೂ ತಲೆ ಹಾಗೂ ಕಾಲುಗಳಿಗೆ ಹೆಚ್ಚಿನ ಗಾಯವಾಗಿದ್ದು, ಕಾರಿನಲ್ಲಿ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಕಾರಿನಿಂದ ಹೊರ ತೆಗೆಯಲು ಸಾರ್ವಜನಿಕರು ಹಾಗೂ ಪೊಲೀಸರು ಹರ ಸಾಹಸ ಪಡುವಂತಾಯಿತು.ಈ ಅಪಘಾತದಿಂದಾಗಿ ಸುಮಾರು 2 ಗಂಟೆಗೂ ಹೆಚ್ಚುಕಾಲ ಟ್ರಾಫಿಕ್ ಜಾಮ್‍ನಿಂದಾಗಿ ವಾಹನಗಳು ರಸ್ತೆಯಲ್ಲೆ ನಿಲ್ಲುವಂತ್ತಾಗಿತ್ತು. ಸ್ಥಳಕ್ಕೆ ಬೇಲೂರು ಪೊಲೀಸ್ ವೃತ್ತ ನಿರೀಕ್ಷಕ ಲೋಕೇಶ್ ಹಾಗೂ ಪಿಎಸ್‍ಐ ಬಾಲು ಹಾಗೂ ಸಿಬ್ಬಂದಿಗಳು ತಕ್ಷಣವೆ ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟರು.

 

► Follow us on –  Facebook / Twitter  / Google+

Facebook Comments

Sri Raghav

Admin