ಜಾಲಿ ರೈಡ್ ತಂದ ಆಪತ್ತು : ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

kunigal

ಕುಣಿಗಲ್,ಅ.10- ಜಾಲಿ ರೈಡ್ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿನಗರದ ರಾಜೀವ್ ಬಂಗೇರಾ(26) ಮೃತಪಟ್ಟ ದುರ್ದೈವಿ. ದಸರಾ ರಜೆ ಹಿನ್ನೆಲೆಯಲ್ಲಿ 20 ಮಂದಿಯ ತಂಡವೊಂದು ಬೆಂಗಳೂರಿನಿಂದ ಬೈಕ್ ರೈಡಿಂಗ್ ಹೊರಟಿದೆ.
ಬೆಳ್ಳೂರು ಕ್ರಾಸ್ ತಲುಪಿ ನಂತರ ಹಿಂದಿರುಗುವಾಗ ರಾಷ್ಟ್ರೀಯ ಹೆದ್ದಾರಿ 75ರ ಹೆರೂರು ಬೈಪಾಸ್ ಬಳಿ ಸೇತುವೆಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ರಾಜೀವ್ ಬಂಗೇರಾ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

► Follow us on –  Facebook / Twitter  / Google+

Facebook Comments

Sri Raghav

Admin