ತಂದೆ,ತಾಯಿಗಳನ್ನು ಅನಾಥರಾಗಿಸಬೇಡಿ : ರಂಗಾಪುರ ಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

tipturu-8

ತಿಪಟೂರು,ಅ.10- ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಹೆತ್ತು-ಹೊತ್ತು ಅನ್ನ-ವಿದ್ಯೆ ನೀಡಿ ದೊಡ್ಡವರನ್ನಾಗಿ ಮಾಡಿದ ತಂದೆ-ತಾಯಿಗಳನ್ನು ಇಳಿವಯಸ್ಸಿನಲ್ಲಿ ಅನಾಥರನ್ನಾಗಿಸದೆ, ಅವರ ಕನಸುಗಳನ್ನು ಪೂರೈಸಿ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಯುವಪೀಳಿಗೆಗೆ ಕರೆ ನೀಡಿದರು. ನಗರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಆಯುಧಪೂಜಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಗುರಿ, ಶ್ರದ್ದೆ, ಶಿಸ್ತು, ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡು ಉನ್ನತ ಸ್ಥಾನ ತಲುಪಬೇಕು. ಜತೆಗೆ  ಮಾತ್ರ ಹೆತ್ತವರ ಆಸೆ-ಆಕಾಂಕ್ಷೆಗಳನ್ನು ಈಡೇರಿಸಬೇಕು.ಇತ್ತೀಚೆಗೆ ಹೆಚ್ಚು ವಿದ್ಯಾವಂತರೆ ಹೆತ್ತವರನ್ನು ಅನಾಥಾಶ್ರಮಕ್ಕೆ ಸೇರಿಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಥೆಯ ಜೀರ್ಣೋದ್ಧಾರಕರಾದ ಚಿಕ್ಕಬಸವಯ್ಯ ಮಾತನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಜೀವನದಲ್ಲಿ ಸಾಧನೆ ಮಾಡಬೇಕು. ಈ ಸಂಸ್ಥೆ 18 ವರ್ಷಗಳಿಂದಲೂ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುತ್ತಿದ್ದು, ಇಲ್ಲಿ ಓದಿದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನೀವು ಸಹ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಮಾದರಿ ವಿದ್ಯಾರ್ಥಿಗಳಾಗಿ ಎಂದು ಹರಸಿದರು.
ಪ್ರಾಂಶುಪಾಲ ರಾಜಶೇಖರ್ ಮಾತನಾಡಿ, ವಿದ್ಯೆ ತಾನಾಗಿಯೇ ಒಲಿಯುವುದಿಲ್ಲ. ಅದಕ್ಕೆ ಪ್ರಾಮಾಣಿಕತೆ, ಪರಿಶ್ರಮ, ಗುರಿ, ತಾಳ್ಮೆ, ಶ್ರದ್ದೆ ಮತ್ತು ಸಂಯಮದ ಅಗತ್ಯ. ಮುಂದಿನ ತಿಂಗಳಿನಿಂದ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಸತತ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.

 

► Follow us on –  Facebook / Twitter  / Google+

Facebook Comments

Sri Raghav

Admin