ಸ್ಯಾಂಡಲ್‍ವುಡ್‍ನಲ್ಲಿ ಹೊಸ ಅಲೆ ಸೃಷ್ಟಿಸಿರುವ ಚಿತ್ರ ಜಾಗ್ವಾರ್

ಈ ಸುದ್ದಿಯನ್ನು ಶೇರ್ ಮಾಡಿ

jagur

ಬೆಂಗಳೂರು, ಅ.10-ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ದೇವೇಗೌಡರ ಕುಟುಂಬದ ಕುಡಿ ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಚಿತ್ರ ಜಬರ್ದಸ್ತ್ ಎನಿಸಿಕೊಂಡು ಸ್ಯಾಂಡಲ್‍ವುಡ್‍ಗೆ ಭರವಸೆಯ ನವ ನಟನನ್ನು ನೀಡಿದೆ.ಚಿತ್ರೀಕರಣ ಆರಂಭದಿಂದಲೂ ಅದ್ದೂರಿತನ ದಿಂದ ತೆರೆ ಕಾಣುವ ಬಗ್ಗೆ ಸುದ್ದಿ ಮಾಡಿದ್ದ ಚಿತ್ರ ಇದೀಗ ಕ್ಲಾಸ್-ಮಾಸ್‍ಗೆ ಮೆಚ್ಚುಗೆಯಾಗಿ ಮುನ್ನುಗ್ಗುತ್ತಿದ್ದು , ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿವೆ.ತೆಲುಗು ಭಾಷೆಯ ಜಾಗ್ವಾರ್ ಚಿತ್ರವೂ ಸಹ ತೆಲಂಗಾಣ ಮತ್ತು ಸೀಮಾಂಧ್ರದಲ್ಲಿ ಜನಮನ್ನಣೆ ಗಳಿಸಿದ್ದು , ಇದಕ್ಕೆ ನಿದರ್ಶನವೆಂಬಂತೆ ಜಾಗ್ವಾರ್ ಜಾಥಾವೂ ನಡೆದಿದೆ.
ಸ್ಯಾಂಡಲ್‍ವುಡ್‍ನಲ್ಲಿ ಹೊಸ ಅಲೆ ಸೃಷ್ಟಿಸಿರುವ ಈ ಚಿತ್ರದ ಮೂಲಕ ನಾಯಕ ನಟನಾಗಿ ಹೊರ ಹೊಮ್ಮಿದ ನಿಖಿಲ್‍ಕುಮಾರ್ ತಮ್ಮ ಮೊದಲನೇ ಚಿತ್ರದ ಸಮಯದಲ್ಲೇ ಅಭಿಮಾನಿಗಳ ಸಂಘ ಅಸ್ತಿತ್ವಕ್ಕೆ ಬಂದಿರುವುದು ಮತ್ತೊಂದು ವಿಶೇಷ.ಡಾ.ರಾಜಕುಮಾರ್ ಅವರ ಸಮಾಧಿ ಬಳಿ ಪೂಜೆ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಾಗ್ವಾರ್ ಜಾತ್ರೆಗೆ ಚಾಲನೆ ನೀಡಿದ್ದರು. ನಂತರ ಸಂತೋಷ್ ಚಿತ್ರಮಂದಿರದವರೆಗೂ ಜಾಥಾ ನಡೆಸಲಾಯಿತು.ಈ ಮಾದರಿಯೂ ಜಾಗ್ವಾರ್ ಜಾಥಾವನ್ನು ನಾಡಿನಾದ್ಯಂತ ಆಚರಿಸುವ ಖುಷಿಯಲ್ಲಿ ಅಭಿಮಾನಿಗಳು ಮುಂದಾಗಿದ್ದಾರೆ.
ಇದಲ್ಲದೆ ಜಾಗ್ವಾರ್ ಚಿತ್ರವನ್ನು ಮತ್ತಷ್ಟು ಪ್ರಚಾರಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮದ ಬಗ್ಗೆಯೂ ಚಿಂತನೆ ನಡೆಯುತ್ತಿದೆ.ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು ಹಾಗೂ ವಿತರಕರಾಗಿ ಸಾಕಷ್ಟು ಸಿನಿಮಾಗಳನ್ನು ನೀಡಿರುವ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಮಗ ನಿಖಿಲ್ ಕುಮಾರ್ ಚಿತ್ರದ ಆರಂಭದಿಂದಲೂ ಬೆನ್ನೆಲುಬಾಗಿ ನಿಂತು ಸಾಕಷ್ಟು ಜವಾಬ್ದಾರಿ ನಿರ್ವಹಿಸಿದ್ದಾರೆ. ತಮ್ಮ ಮಗನ ಚೊಚ್ಚಲ ಚಿತ್ರಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಭರ್ಜರಿ ಓಪನಿಂಗ್ ದೊರೆತಿರುವುದು ಕುಮಾರಸ್ವಾಮಿಗೆ ಸಂತಸ ಉಂಟು ಮಾಡಿದ್ದು, ಇದೇ ಹುಮ್ಮಸ್ಸಿನಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಿಖಿಲ್ ಅಭಿನಯದ ಮತ್ತೊಂದು ಚಿತ್ರವನ್ನು ನಿರ್ಮಿಸುವ ಹುಮ್ಮಸ್ಸಿನಲ್ಲಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin