ಜಯಲಲಿತಾ ಮೇಲೆ ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಕಾಟ್ಜುಗೆ ಲವ್ ಆಗಿತಂತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Love

ಚೆನ್ನೈ,ಅ.12-ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಮಾಧ್ಯಮಗಳಿಗೆ ಆಹಾರವಾಗುತ್ತಿರುವ ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಈಗ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರಿಗೆ ಮಾರ್ಕಂಡೇಯ ಕಾಟ್ಜು ಫೇಸ್‍ಬುಕ್ ಮೂಲಕ ಪ್ರೇಮ ಪ್ರಸ್ತಾಪವನ್ನಿಟ್ಟು ವಿವಾದಕ್ಕೆ ಸಿಲುಕಿದ್ದಾರೆ. ಫೇಸ್‍ಬುಕ್‍ನಲ್ಲಿ ಮಾರ್ಕಂಡೇಯ ಕಾಟ್ಜು ಅವರು ಜಯಲಲಿತ ಅವರನ್ನು ಸಿಂಹಿಣಿ(ಖ್ಯಾತವೆತ್ತ ಮಹಿಳೆ) ಎಂದು ಹೊಗಳಿ ತಮ್ಮ ಪ್ರೇಮ ಪ್ರಸ್ತಾಪವನ್ನಟ್ಟಿದ್ದಾರೆ. ಫೇಸ್‍ಬುಕ್‍ನಲ್ಲಿ ಹಾಕಿರುವ ಸಂದೇಶ ಹೀಗಿದ್ದು, ಜಯಲಲಿತ ಅವರು ಭಯವಿಲ್ಲದ ಸಿಂಹಿಣಿ. ಅವರ ವ್ಯಕ್ತಿತ್ವ ಸಿಂಹಕ್ಕೆ ಅನ್ವರ್ಥ. ನಾನು ಚಿಕ್ಕವನಿರುವಾಗ ಜಯ ಕೂಡ ಚಿಕ್ಕವಳಾಗಿದ್ದರು. ಅವರ ಸೌಂದರ್ಯಕ್ಕೆ ನನ್ನ ಮನಸ್ಸು ಸೋತು ಪ್ರೀತಿ ಬಲೆಗೆ ಬಿದ್ದಿದೆ ಎಂಬುದನ್ನು ಫೇಸ್‍ಬುಕ್‍ನಲ್ಲಿ ತಿಳಿಸಿದ್ದಾರೆ.  ಈ ಬಗ್ಗೆ ಜಯಾ ಗೊತ್ತೇ ಇಲ್ಲ. ತೀವ್ರ ಕಾಯಿಲೆಯಿಂದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಬೇಗ ಗುಣಮುಖರಾಗಲಿ ಎಂದು `ಹರಿಓಂ’ ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಸಂದೇಶ ಹಾಕಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಜಯಲಲಿತಾ ಅವರನ್ನು ತಾವು ಎರಡು ಬಾರಿ ಭೇಟಿ ಮಾಡಿರುವ ವಿಷಯ ಕೂಡ ಬರೆದಿದ್ದಾರೆ. ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ನಾನು ಮೊದಲನೇ ಬಾರಿಗೆ ಜಯಾ ಅವರನ್ನು ಭೇಟಿ ಮಾಡಿದ್ದೆ. ಅಲ್ಲದೆ ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷನಾಗಿದ್ದಾಗ ಜಯಾ ಅವರನ್ನು 2ನೇ ಬಾರಿಗೆ ಭೇಟಿ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಕಾಟ್ಜು ಅವರ ಚಿಕ್ಕವಯಸ್ಸಿನಲ್ಲಿದ್ದಾಗ ಜಯಲಲಿತಾ ಅವರ ಚಿತ್ರಗಳನ್ನು ವೀಕ್ಷಣೆ ಮಾಡಿದ್ದರು. ಅವರ ಸೌಂದರ್ಯಕ್ಕೆ ಸೋತು ಗಾಢವಾಗಿ ಪ್ರೀತಿ ಮಾಡುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.
ಇಂಥ ವಿಚಿತ್ರ ಮೆಸೇಜ್ ಹಾಕಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದದ ಕಿಡಿ ಹಿನ್ನೆಲೆಯಲ್ಲಿ ಅವರ ಫೇಸ್‍ಬುಕ್‍ನಲ್ಲಿ ಬರಹವನ್ನು ತೆಗೆದು ಹಾಕಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin