ಪಾಕ್ ಪತ್ರಕರ್ತನಿಗೆ ನಿರ್ಬಂಧ, ಅಮೆರಿಕ ತೀವ್ರ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

pAK

ವಾಷಿಂಗ್ಟನ್,ಅ.12-ಪಾಕಿಸ್ತಾನ ಸರ್ಕಾರ ಹಾಗೂ ಸೇನಾ ನಾಯಕತ್ವ ನಡುವಿನ ಕಲಹ ಹಾಗೂ ಭಿನ್ನಾಭಿಪ್ರಾಯಗಳ ಬಗ್ಗೆ ವರದಿ ಮಾಡಿದ ಡಾನ್ ಪತ್ರಿಕೆಯ ವರದಿಗಾರನ ಮೇಲೆ ಪಾಕ್ ಸರ್ಕಾರ ನಿರ್ಬಂಧ ಹೇರಿರುವುದರ ಬಗ್ಗೆ ಅಮೆರಿಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಸರ್ಕಾರ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಬೇಡ. ಪಾಕ್‍ನ ಈ ನಡೆಗೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕ ವರದಿಗಾರನ ಪರವಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ವಿಷಯವನ್ನು ಮುಖ್ಯ ವೇದಿಕೆಯಲ್ಲಿ ಪ್ರಸ್ತಾಪಿಸಲಾಗುವುದು. ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರಿಗೆ ಬರೆಯುವ ಸ್ವಾತಂತ್ರ್ಯವಿದ್ದು, ವಾಸ್ತಾಂಶ ಸ್ಥಿತಿಯನ್ನು ಬರೆದಿರುವ ಪತ್ರಕರ್ತನ ವಿರುದ್ಧ ನಿರ್ಬಂಧ ಹೇರಿರುವ ಪಾಕಿಸ್ತಾನದ ಉದ್ದೇಶವೇನು ಎಂಬುದನ್ನು ಪ್ರಶ್ನಿಸಿದೆ.

ಪಾಕ್ ನೆಲದಲ್ಲಿ ಅಲ್ಲಿನ ಸರ್ಕಾರವು ಉಗ್ರ ಸಂಘಟನೆಗೆ ಪೋಷಣೆ  ನೀಡಿ ಐಎಸ್‍ಐ, ಗುಪ್ತಚರ ಸಂಸ್ಥೆಯ ಹಕ್ಕಾನಿ ಲಷ್ಕರ್- ಎ-ತೊಯ್ಬ , ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಸೇರಿದಂತೆ ಮತ್ತಿತರ ಸಂಘಟನೆಗಳನ್ನು ರಕ್ಷಿಸಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಒಬ್ಬಂಟಿಯಾಗುತ್ತಿದ್ದು, ಈ ಬಗ್ಗೆ ಪಾಕ್ ಸರ್ಕಾರ ಹಾಗೂ ಸೇನಾ ನೆಲೆಗಳ ನಡುವೆ ತಿಕ್ಕಾಟ ಕುರಿತ ವಿಷಯಗಳನ್ನು ಡಾನ್ ಪತ್ರಿಕೆ ವರದಿ ಮಾಡಿತ್ತು.  ಈ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪಾಕ್ ಸರ್ಕಾರ ವರದಿಗಾರನ ಮೇಲೆ ದೇಶಬಿಟ್ಟು ಹೋಗದಂತೆ ನಿರ್ಬಂಧ ಹೇರಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin