ರಾವಣ ಪ್ರತಿಕೃತಿ ದಹನ ವಿಚಾರವಾಗಿ ಘರ್ಷಣೆ ; 50 ಕಾರ್ಯಕರ್ತರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Vardhaman

ಲೂಧಿಯಾನ, ಅ.12-ಲಂಕಾಸುರ ರಾವಣನ ಪ್ರತಿಕೃತಿ ದಹನ ವಿಚಾರವಾಗಿ ಶಿರೋಮಣಿ ಅಕಾಲಿದಳ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು 50ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಇಲ್ಲಿ ನಡೆದಿದೆ.  ಲೂಧಿಯಾನದ ಚಂಡಿಗಢ ರಸ್ತೆಯಲ್ಲಿನ ವರ್ಧಮಾನ್ ಚೌಕದಲ್ಲಿ ವಿಜಯದಶಮಿ ದಿನವಾದ ನಿನ್ನೆ ದಶಕಂಠ ರಾವಣದ ಬೃಹತ್ ಭೂತದಹನಕ್ಕೆ ವೇದಿಕೆ ಸಜ್ಜಾಗಿತ್ತು. ಪಂಜಾಬ್‍ನಲ್ಲಿ ಹೆರಾಯಿನ್ ಮಾದಕವಸ್ತು ಮಾರಾಟವನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಶ್ವೇತ ವರ್ಣದ ರಾವಣನ ಪ್ರತಿಕೃತಿ ಹಾಗೂ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಉಪ ಮುಖ್ಯಮಂತ್ರಿ ಸುಖ್‍ಬೀರ್ ಸಿಂಗ್ ಬಾದಲ್ ಛಾಯಾಚಿತ್ರಗಳನ್ನು ದಹಿಸಲು ಸಜ್ಜಾಗಿದ್ದರು. ರಾವಣದ ದಹನ ಮಾಡಲು ಕಪ್ಪು ಬಟ್ಟೆ ಅಥವಾ ಕಾಗದವನ್ನು ಬಳಸುವುದು ವಾಡಿಕೆ.

ಶಿರೋಮಣಿ ಅಕಾಲಿದಳ ಕಾರ್ಯಕರ್ತರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆದು ಘರ್ಷಣೆ ಉಲ್ಬಣಗೊಂಡಿತು.  ಘರ್ಷಣೆ ಮತ್ತು ಹಿಂಸಾಚಾರದಲ್ಲಿ ಈ ಎರಡೂ ಪಕ್ಷಗಳ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುರ್‍ಪ್ರೀತ್ ಗೊಗ್ಗಿ ಮತ್ತು ಯುವ ಮುಖಂಡ ರವೀಂದರ್ ಗಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin