ಸಿಲಿಕಾನ್ ಸಿಟಿ ಮಂದಿಗೆ ದಸರಾ ‘ಚೆಲ್ಲಾಟ’, ಪೌರ ಕಾರ್ಮಿಕರಿಗೆ ಪ್ರಾಣಸಂಕಟ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Garbage

ಬೆಂಗಳೂರು, ಅ.12- ಹೌದು, ಒಂದು ಕಡೆ ಬೆಂಗಳೂರಿನ ಜನ ದಸರಾಗೆ ವಾಹನ, ಮನೆ ಪೂಜೆ ಮಾಡಿ ಎಲ್ಲಂದರಲ್ಲಿ ಕಸ ಚೆಲ್ಲುತ್ತಿದ್ದರೆ, ಇತ್ತ ನಗರವನ್ನು ಸ್ವಚ್ಛಗೊಳಿಸಲು ಪೂರಕಾರ್ಮಿಕರು ಓವರ್ ಡೂಟಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಪಾಪ… ಪೌರ ಕಾರ್ಮಿಕರು ಇನ್ನೂ ಎರಡು-ಮೂರು ದಿನಗಳು ಹೆಚ್ಚುವರಿಯಾಗಿ ಶ್ರಮ ಹಾಕಬೇಕು ಈ ಕಸವನ್ನು ತೆರವುಗೊಳಿಸಲು… ಇದು ದಸರಾ ಹಬ್ಬ ಆಚರಣೆಯ ಫಲ.  ನಗರದ ಯಶವಂತಪುರ, ಕೆಆರ್ ಮಾರುಕಟ್ಟೆ, ಎಪಿಎಂಸಿ ಯಾರ್ಡ್, ಯಲಹಂಕ, ಮಲ್ಲೇಶ್ವರಂ ಮಾರುಕಟ್ಟೆ, ಸದಾಶಿವನಗರ, ಜಯನಗರ, ಜೆಪಿ ನಗರ, ಬಸವನಗುಡಿ ಎಲ್ಲೆಡೆ ಬಾಳೆಕಂಬ, ಮಾವಿನ ಸೊಪ್ಪು, ಬೂದುಗುಂಬಳಕಾಯಿ, ಕೊಳೆತ ಹೂವಿನ ರಾಶಿ ರಾಶಿ ಕಸ ಬಿದ್ದಿದೆ.

ಮಾಮೂಲಿಯಂತೆ ಪೌರ ಕಾರ್ಮಿಕರು ಕಸ ತೆಗೆಯುತ್ತಿದ್ದಾರಾದರೂ ಒಂದಕ್ಕೆ ಐದು ಪಟ್ಟು ಹೆಚ್ಚಿನ ಕಸ ಬಿದ್ದಿರುವುದರಿಂದ ಕೆಲವೆಡೆ ಜೆಸಿಬಿಗಳನ್ನು ಬಳಸಿ ಕಸ ತೆಗೆಯಲಾಗುತ್ತಿದೆ. ನಿನ್ನೆ ಮೊನ್ನೆ ಬಹುತೇಕ ಕಸದ ಲಾರಿಗಳನ್ನೆಲ್ಲ ಪೂಜೆ ಮಾಡಿ ನಿಲ್ಲಿಸಲಾಗಿತ್ತು. ಇಂದು ಅವು ಕಾರ್ಯಾರಂಭ ಮಾಡಿವೆ. ಎಲ್ಲೆಡೆ ರಾಶಿ ರಾಶಿ ಕಸವನ್ನು ತೆರವು ಮಾಡುತ್ತಿವೆ.  ನಿನ್ನೆ ರಾತ್ರಿ ನಗರದ ವಿವಿಧೆಡೆ ಮಳೆ ಬಂದಿದ್ದರಿಂದ ನೀರು ನಿಂತು ಹಲವೆಡೆ ಅದ್ವಾನವಾಗಿದೆ. ಇದರ ಜತೆ ರಾಶಿ ರಾಶಿ ಕಸ ಬೇರೆ ಬೆರೆತಿದೆ. ಇದನ್ನು ತೆರವುಗೊಳಿಸುವಲ್ಲಿ ಪೌರ ಕಾರ್ಮಿಕರು ನಿರತರಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin