ಡೆಲಿವರಿ ನೀಡಲು ಬಂದು ವಿದೇಶಿ ಮಹಿಳೆಯೊಂದಿಗೆ ಅಸಭ್ಯ ವರ್ತಿಸಿ ಪೊಲೀಸರ ಅತಿಥಿಯಾದ

ಈ ಸುದ್ದಿಯನ್ನು ಶೇರ್ ಮಾಡಿ

dELIVERY

ಬೆಂಗಳೂರು, ಅ.13- ಆನ್ಲೈನ್ ಶಾಪಿಂಗ್ ಮಾಡಿದ್ದ ವಸ್ತುವನ್ನು ಡೆಲಿವರಿ ಕೊಡಲು ಬಂದಿದ್ದ ವ್ಯಕ್ತಿಯೊಬ್ಬ ವಿದೇಶಿ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್ನಲ್ಲಿ ನಡೆದಿದೆ.ಅಬು ಸಲ್ಮಾನ್ ಎಂಬಾತ ಬಂಧಿತ ಆರೋಪಿ.  ಇರಾನಿ ಮೂಲದ 23 ವರ್ಷದ ಮಹಿಳೆಯೊಬ್ಬರು ಆನ್ಲೈನ್ನಲ್ಲಿ ಶೂ ಬುಕ್ ಮಾಡಿದ್ದರು. ಇದನ್ನು ಡೆಲಿವರಿ ಮಾಡಲು ಮನೆಗೆ ಅಬು ಸಲ್ಮಾನ್ ತೆರಳಿದ್ದ. ಪಾರ್ಸಲ್ ರಿಸೀವ್ ಮಾಡಿಕೊಳ್ಳಲು ಮಹಿಳೆ ಬಂದಾಗ ಈತ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ಕೂಗಿಕೊಂಡಿದ್ದಾಳೆ. ಆಗ ಅಬು ಸಲ್ಮಾನ್ ಅಪಾರ್ಟ್ಮೆಂಟ್ನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಆಗ ಅಕ್ಕಪಕ್ಕದವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin