ಪುಣೆಯಲ್ಲಿ ದಲಿತರು-ಮರಾಠರ ನಡುವೆ ಘರ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Rally

ಪುಣೆ, ಅ.13- ದಲಿತರು ಮತ್ತು ಮರಾಠರ ನಡುವೆ ಇಂದು ಭುಗಿಲೆದ್ದ ಘರ್ಷಣೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಿನ್ನೆ ಮರಾಠಿಗರು ಪುಣೆಯಲ್ಲಿ ಭಾರೀ ರ‍್ಯಾಲಿ ನಡೆಸಿದ ಬೆನ್ನಲ್ಲೆ ಇಂದು ಘರ್ಷಣೆ ಉಲ್ಬಣಗೊಂಡಿದೆ. ಎಸ್‍ಸಿ-ಎಸ್‍ಟಿ ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಇಂದು ಮರಾಠಿಗರು ಲೋಹೆಗಾಂವ್ ಪೊಲೀಸ್ ಠಾಣೆಯತ್ತ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ದಲಿತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ ಘರ್ಷಣೆಗೆ ಕಾರಣವಾಯಿತು. ಗಲಭೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin