‘ಬಲವಂತವಾಗಿ ಚುಂಬಿಸಿ, ಅಂಗಾಂಗ ಸ್ಪರ್ಶಿಸಿದ’ : ಸ್ತ್ರೀಲೋಲ ಟ್ರಂಪ್‍ನ ಇನ್ನಷ್ಟು ಪೋಲಿ ಆಟಗಳು ಬಯಲು

ಈ ಸುದ್ದಿಯನ್ನು ಶೇರ್ ಮಾಡಿ

rump-01

ನ್ಯೂಯಾರ್ಕ್, ಅ.13– ಅಮೆರಿಕ ಅಧ್ಯಕ್ಷ ಹುದ್ದೆಗೇರಲು ತವಕಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‍ರ ಇನ್ನೆರೆಡು ಸ್ತ್ರೀಲಂಪಟತನ ಪ್ರಕರಣಗಳು ಬಯಲಾಗಿದ್ದು, ಮತ್ತೆ ಪೇಚಿಗೆ ಸಿಲುಕಿದ್ದಾರೆ. ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಇಬ್ಬರು ಮಹಿಳೆಯರು ಆರೋಪಿಸಿದ್ದಾರೆ. ವಿಮಾನದಲ್ಲಿ ಟ್ರಂಪ್ ತಮ್ಮನ್ನು ಬರಸೆಲೆದು ಅನುಚಿತವಾಗಿ ವರ್ತಿಸಿದರು ಎಂದು ಜೆಸ್ಸಿಕಾ ಲೀಡ್ಸ್ ಆರೋಪಿಸಿದ್ದರೆ, ಲಿಫ್ಟ್ ಹೊರಗೆ ಅವರು ತಮ್ಮನ್ನು ಬಲವಂತವಾಗಿ ಚುಂಬಿಸಿ ಅಂಗಾಂಗ ಸ್ಪರ್ಶಿಸಿದರೆಂದು ರಾಚೆಲ್ ಕ್ರೂಕ್ಸ್ ದೂರಿದ್ದಾರೆ.

ಪೋಲಿ ಟ್ರಂಪ್‍ವಿರುದ್ಧ ಇನ್ನೆರೆಡು ಕುಚೇಷ್ಟೆ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜನಪ್ರಿಯತೆ ಕುಸಿಯುತ್ತಿದ್ದು, ಅಧ್ಯಕ್ಷೀಯ ಚುನಾವಣೆ ಮೇಲೆ ದುಷ್ಪರಿಣಾಮ ಬೀರಲಿದೆ. ನಾಲಿಗೆ ಮೇಲೆ ಹಿಡಿತ ಇಲ್ಲದ ಟ್ರಂಪ್ ಪರಮ ಸ್ತ್ರೀಲೋಲ ಎಂಬುದೂ ಈಗ ಜಗಜ್ಜಾಹೀರವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin