ವಿಶ್ವಸಂಸ್ಥೆಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಅಂಟೋನಿಯೋ ಗುಟೆರೆಸ್ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

UN-secratory

ವಿಶ್ವಸಂಸ್ಥೆ, ಅ.13 -ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೋನಿಯೋ ಗುಟೆರೆಸ್ ವಿಶ್ವಸಂಸ್ಥೆಯ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ . ಪೋರ್ಚುಗಲ್‌ನ ಮಾಜಿ ಪ್ರಧಾನಿ ಗುಟೆರೆಸ್, ಬಾನ್ ಕೀ ಮೂನ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಹಾಲಿ ಮಹಾಪ್ರಧಾನ ಕಾರ್ಯದರ್ಶಿ ಬಾನ್‌ ಕಿ–ಮೂನ್‌ ಅವರ ಅವಧಿ ಡಿಸೆಂಬರ್‌ 31ರಂದು ಮುಕ್ತಾಯವಾಗಲಿದ್ದು, ಅವರ ಉತ್ತರಾಧಿಕಾರಿ ಗುಟೆರೆಸ್ ಆಯ್ಕೆ ಆಗಿದ್ದಾರೆ. ಗುಟೆರೆಸ್ ವಿಶ್ವಸಂಸ್ಥೆಯ ಹೈಕಮೀಷನರ್ ಆಗಿ 10 ವರ್ಷಗಳ ಸೇವೆ ಸಲ್ಲಿಸಿದ್ದಾರೆ.  ವಿಶ್ವಸಂಸ್ಥೆ ಶ್ರೀಮಂತ ರಾಷ್ಟ್ರಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ತಪ್ಪು ಮಾಡುವ ರಾಷ್ಟ್ರಗಳ ವಿರುದ್ಧ ಕ್ರಮಕೈಗೊಳ್ಳುವ ಶಕ್ತಿಯನ್ನೂ ಹೊಂದಿಲ್ಲ. ಹೀಗಾಗಿ ಮಹಾಪ್ರಧಾನ ಕಾರ್ಯದರ್ಶಿಯಾಗಿ ಯಾರೇ ಆಯ್ಕೆಯಾದರೂ ಒಂದೇ. ಅವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

► Follow us on –  Facebook / Twitter  / Google+

Facebook Comments

Sri Raghav

Admin