ಸತತ 70 ವರ್ಷಗಳ ಆಡಳಿತ ನಡೆಸಿದ್ದ ಥಾಯ್ಲೆಂಡ್’ನ ದೊರೆ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

 

ಬ್ಯಾಂಕಾಕ್ ಅ.13 : ಸತತ 70 ವರ್ಷಗಳ ಆಡಳಿತ ನಡೆಸಿದ್ದ ಥಾಯ್ಲೆಂಡ್ನ ದೊರೆ ಭೂಮಿಬೋಲ್ ಅದುಲ್ಯದೇಜ್ ಗುರುವಾರ ನಿಧನರಾಗಿದ್ದಾರೆ. ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಥಾಯ್ಲೆಂಡ್ ಅರಮನೆ ಪ್ರಕಟಿಸಿದೆ. ಬ್ಯಾಂಕಾಕ್ನ ಸಿರಿರಾಜ್ ಆಸ್ಪತ್ರೆಯಲ್ಲಿ ಗುರುವಾರ ದೊರೆ ಶಾಂತರಾಗಿ ಕೊನೆಯುಸಿರೆಳೆದಿರುವುದಾಗಿ ಅರಮನೆ ತಿಳಿಸಿದೆ. ವೈದ್ಯರ ತಂಡ ಅವಿರತ ಶ್ರಮ ಪಟ್ಟು ಚಿಕಿತ್ಸೆ ನೀಡಿದರೂ ದೊರೆಯ ಆರೋಗ್ಯ ಸ್ಥಿತಿ ಸುಧಾರಣೆಯಾಗಲಿಲ್ಲ, ಬದಲಿಗೆ ಇಂದು ಮತ್ತಷ್ಟು ವಿಷಮಿಸಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ ಶೋಕಾಚರಣೆ ಅಥವಾ ಉತ್ತರಾಧಿಕಾರತ್ವದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.

ಜಗತ್ತಿನಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಜನೆಂಬ ಖ್ಯಾತಿ ಹೊಂದಿರುವ 88 ವರ್ಷದ ಭೂಮಿಬೋಲ್ ಅದುಲ್ಯದೇಜ್ ಇಲ್ಲಿನ ಸಿರಿರಾಜ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 3:52ಕ್ಕೆ ಕೊನೆಯುಸಿರೆಳೆದರು ಎಂದು ಅರಮನೆ ಪ್ರಕಟಣೆ ತಿಳಿಸಿದೆ. ಕಳೆದ 2 ವರ್ಷಗಳಿಂದ ಅವರು ಬಹು ಸಮಯ ಆಸ್ಪತ್ರೆಯಲ್ಲಿಯೇ ಕಳೆದಿದ್ದರು.
ಥಾಯ್ಲೆಂಡ್ ಜನತೆಯಿಂದ ದೇವಮಾನವ ಎಂದೇ ಕರೆಯಲ್ಪಡುತ್ತಿದ್ದ ಅವರು ಚಕ್ರಿ ಸಾಮ್ರಾಜ್ಯದ 9ನೇ ಸಾಮ್ರಾಟರಾಗಿದ್ದರು. ಅಣ್ಣನ ಸಾವಿನ ನಂತರ 1946ರಲ್ಲಿ ಪಟ್ಟಕ್ಕೇರಿದ್ದ ಅವರಿಗೆ ‘ರಾಮ 9’ ಎಂದೂ ಕರೆಯಲಾಗುತ್ತಿತ್ತು.  63 ವರ್ಷದ ಯುವರಾಜ ಮಹಾ ವಾಚಿರಾಲೋನ್ಕೊನ್ ಮುಂದಿನ ದೊರೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪ್ರಧಾನಿ ಪ್ರಯುತ್ ಚಾನ್-ಓಚಾ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin