ಉದ್ಯೋಗಾವಕಾಶ : ಶೀಘ್ರಲಿಪಿಗಾರರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

stenographer

ಕೋಲಾರ, ಅ.14– ಜಿಲ್ಲಾಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶೀಘ್ರಲಿಪಿಗಾರರ ಒಟ್ಟು ಹುದ್ದೆಗಳ ಸಂಖ್ಯೆ 1 ಆಗಿದ್ದು ಇದು ಪ್ರವರ್ಗ1 ಮಹಿಳಾ ಮೀಸಲಾತಿಯಾಗಿದೆ. ಬೆರಳಚ್ಚುಗಾರರು ಒಟ್ಟು ಹುದ್ದೆಗಳ ಸಂಖ್ಯೆ 1 ಆಗಿದ್ದು ಇದು ಪರಿಶಿಷ್ಟ ಪಂಗಡ ಗ್ರಾಮೀಣ ಅಭ್ಯರ್ಥಿಗೆ ಮೀಸಲಾತಿ ಹುದ್ದೆಯಾಗಿದೆ.   ಆದೇಶ ಜಾರಿಕಾರರು ಒಟ್ಟು ಹುದ್ದೆಗಳ ಸಂಖ್ಯೆ 4 ಆಗಿದ್ದು ಇದರಲ್ಲಿ ಪರಿಶಿಷ್ಟ ಪಂಗಡ ಮಹಿಳೆ 1, ಪ್ರವರ್ಗ2(ಎ) ಗ್ರಾಮೀಣ 1, ಸಾಮಾನ್ಯ ಅಂಗವಿಕಲ 1, ಮಹಿಳೆ 1 ಗೆ ಹುದ್ದೆಗಳಾಗಿವೆ. ಸೇವಕರ ಹುದ್ದೆಗಳು 2 ಆಗಿದ್ದು ಪರಿಶಿಷ್ಟ ಜಾತಿ ಮಹಿಳೆ 1 ಸಾಮಾನ್ಯ ಯೋಜನಾ ನಿರಾಶ್ರಿತರು 1 ಮೀಸಲಾತಿ ಹುದ್ದೆಯಾಗಿದೆ.
ಈ ಸಂಬಂಧ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ನ.5ರೊಳಗಾಗಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ, ವಯೋಮಿತಿ, ಹುದ್ದೆಗಳ ವರ್ಗೀಕರಣ, ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸೂಚನಾ ಫಲಕವನ್ನು ನೋಡಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ರಾಜೇಂದ್ರ ಬಾದಾಮಿಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin