ಖಾಸಗಿ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದು 9 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

9-DeaD

ರಟ್ಲಂ (ಮಧ್ಯ ಪ್ರದೇಶ), ಅ.14- ಖಾಸಗಿ ಬಸ್ಸೊಂದು ಪ್ರಪಾತಕ್ಕೆ ಉರುಳಿ ಕನಿಷ್ಟ 9 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ರಟ್ಲಂ ಜಿಲ್ಲೆಯ ನಾಮ್ಲಿ ಪಟ್ಟಣದ ಬಳಿ ನಡೆದಿದೆ. ಪ್ರಪಾತಕ್ಕೆ ಬಿದ್ದ ಬಸ್‍ನಿಂದ ಈವರೆಗೆ 9 ಮಂದಿಯ ಶವಗಳನ್ನು ಹೊರತೆಗೆಯಲಾಗಿದೆ ಎಂದು ರಟ್ಲಂ ಪೆÇಲೀಸ್ ವರಿಷ್ಠಾಧಿಕಾರಿ ಅವಿನಾಶ್ ಶರ್ಮ ಹೇಳಿದ್ದಾರೆ.
ರಟ್ಲಂನಿಂದ ಮಂಡ್‍ಸೌರ್‍ಗೆ ಅತಿವೇಗದಿಂದ ಈ ಬಸ್ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಬಸ್‍ನಲ್ಲಿ ಸುಮಾರು 45 ಮಂದಿ ಇದ್ದರು.ಗಾಯಗೊಂಡಿರುವ ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin