26/11 ದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡಿ ಶೌರ್ಯ ಮೆರೆದಿದ್ದ ಶ್ವಾನ ಸೀಸರ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Caesar

ಮುಂಬೈ,ಅ.14- ದೇಶಾದ್ಯಂತ ಬೆಚ್ಚಿ ಬೀಳಿಸಿದ 2011ರ ವಾಣಿಜ್ಯನಗರಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನೂರಾರು ಜನರ ಪ್ರಾಣ ಉಳಿಸಿ ಪ್ರೀತಿಗೆ ಪಾತ್ರವಾಗಿದ್ದ ಶ್ವಾನ ಸೀಸರ್ ಇನ್ನಿಲ್ಲ.  ವಿರಾರ್‍ನ ರಿಟೈರ್‍ಮೆಂಟ್ ಅನಿಮಲ್ ಹೋಂನಲ್ಲಿ ನಿನ್ನೆ ಸೀಸರ್ ಇಹಲೋಕ ತ್ಯಜಿಸಿದ್ದು , ಸೀಸರ್ ಮೇಲೆ ರಾಷ್ಟ್ರಧ್ವಜ ಹೊದಿಸಿ ಅಂತಿಮ ನಮನ ಸಲ್ಲಿಸಲಾಯಿತು.
ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಸೈನಿಕರಂತೆ ಉಗ್ರರ ವಿರುದ್ಧ ಪ್ರಚಂಡ ಹೋರಾಟ ನಡೆಸಿ ನೂರಾರು ಜನರನ್ನು ಬದುಕುಳಿಸಿ ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಶ್ವಾನ ಸೀಸರ್‍ನ ಈ ಹೋರಾಟಕ್ಕೆ ಇಡೀ ದೇಶವೇ ಹೆಮ್ಮೆಪಟ್ಟಿತ್ತು.  ಮುಂಬೈ ದಾಳಿಯ ಹೀರೋ ಶ್ವಾನಗಳಾದ ಲೈಕಾ, ಟೈಗರ್ ಮತ್ತು ಸುಲ್ತಾನ್ ಸಾವನ್ನಪ್ಪಿದ್ದವು. ಅಂದಿನಿಂದ ಸೀಸರ್ ಖಿನ್ನತೆಗೊಳಗಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೀಸರ್‍ನನ್ನು ಚಿಕಿತ್ಸೆಗಾಗಿ ಪರೆಲ್‍ನ ಪಶು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಸೀಸರ್ ನಿನ್ನೆ ಸಾವನ್ನಪ್ಪಿದೆ. ಭಯೋತ್ಪಾದಕರ ವಿರುದ್ಧ ದಿಟ್ಟ ಸೇನಾನಿಯಂತೆ ಹೋರಾಡಿ ನೂರಾರು ಜನರನ್ನು ಪಾರು ಮಾಡಿದ್ದ ಸೀಸರ್‍ಗೆ ಸಕಲ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin