ಆಹಾರ ಅರಸಿ ಬಂದು ನೀರಿನ ತೊಟ್ಟಿಗೆ ಬಿದ್ದಿದ್ದ ಚಿರತೆ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Cheetha01

ರಾಮನಗರ, ಅ.15- ಆಹಾರ ಅರಸಿಬಂದ ಚಿರತೆಯೊಂದು ನೀರಿನ ತೊಟ್ಟಿಗೆ ಬಿದ್ದಿರುವ ಘಟನೆ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ನಡೆದಿದೆ. ಸುಮಾರು 12 ಅಡಿ ಆಳದ ನೀರಿನ ತೊಟ್ಟಿಯಲ್ಲಿ ಎರಡು ವರ್ಷದ ಚಿರತೆ ಬಿದ್ದಿರುವುದನ್ನು ನೋಡಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟದಿಂದ ಅರವಳಿಕೆ ತಜ್ಞರು ಸ್ಥಳಕ್ಕೆ ಬಂದು ಚಿರತೆಯನ್ನು ಹಿಡಿದು ಸಾಗಿಸಿದ್ದಾರೆ. ಚಿರತೆಯನ್ನು ಮಹದೇಶ್ವರಬೆಟ್ಟಕ್ಕೆ ಬಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin