ಡೊನಾಲ್ಡ್ ಟ್ರಂಪ್‌ಗೆ ನನ್ನ ಬೆಂಬಲವಿಲ್ಲ : ಇಲಿಯಾನಾ

ಈ ಸುದ್ದಿಯನ್ನು ಶೇರ್ ಮಾಡಿ

iliana
ವಿವಾದಗಳ ಸರಮಾಲೆಯನ್ನೇ ಸೃಷ್ಟಿಸಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ತಮ್ಮ ಬೆಂಬಲವಿಲ್ಲ ಎಂದು ಬಳಕುವ ಸೊಂಟದ ನಟಿ ಇಲಿಯಾನಾ ಡಿಕ್ರೂಜ್ ಹೇಳಿದ್ದಾಳೆ. ಟ್ರಂಪ್ ಪರ ಚುನಾವಣಾ ಪ್ರಚಾರಕ್ಕೆ ತಾರಾ ಸ್ಪರ್ಶ ನೀಡಲು ಅಮೆರಿಕದಲ್ಲಿ ನಡೆಯುವ ಬೃಹತ್ ಸಂಗೀತಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲ್ಲಿ ಭಾಗವಹಿಸಲು ಬಾಲಿವುಡ್ ಮತ್ತು ದಕ್ಷಿಣ ಭಾರತದ ತಾರೆಯರಿಗೆ ಆಹ್ವಾನ ನೀಡಲಾಗಿದೆ. ಆದರೆ, ಇದರಲ್ಲಿ ಇಲಿಯಾನಾ ಪಾಲ್ಗೊಳ್ಳುತ್ತಿಲ್ಲ.  ಬಾಲಿವುಡ್ ವಿಶ್ವದಾದ್ಯಂತ ಲೋಕಪ್ರಿಯವಾಗಿದೆ ಮತ್ತು ಬಿ-ಟೌನ್ ತಾರೆಯರು ತುಂಬಾ ಜನಪ್ರಿಯರಾಗಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಿಂದಿ ಚಿತ್ರರಂಗದ ನಟ-ನಟಿಯರು ಭಾಗವಹಿಸುತ್ತಿರುವುದು ಸಂತೋಷ. ಆದರೆ ನಾನು ಇದರಲ್ಲಿ ಭಾಗವಹಿಸುತ್ತಿಲ್ಲ ಎಂದು ಈ ಬೆಡಗಿ ಹೇಳಿದ್ದಾಳೆ.

ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ನಾನು ಸಾಕಷ್ಟು ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. ಅದು ನನಗೆ ಇಷ್ಟವಾದರೆ ಮಾತ್ರ ನಾನು ಅಂಥ ಇವೆಂಟ್‌ಗಳಲ್ಲಿ ಭಾಗವಹಿಸುತ್ತೇನೆ. ನನಗೆ ಇಷ್ಟವಾಗದಿದ್ದರೆ ಅದು ಎಷ್ಟೇ ದೊಡ್ಡ ಸಮಾರಂಭವಿದ್ದರೂ ನಾನು ಪಾಲ್ಗೊಳ್ಳುವುದಿಲ್ಲ. ನಾನು ಡೊನಾಲ್ಡ್ ಟ್ರಂಪ್‌ಗೂ ಬೆಂಬಲ ನೀಡುವುದಿಲ್ಲ ಎಂದಿದ್ದಾಳೆ ಇಲಿಯಾನಾ. ತಾರೆಯರಾದ ಮಲ್ಲೈಕಾ ಅರೋರಾ, ಪ್ರಭು ದೇವ, ಶ್ರಿಯಾ ಸರನ್, ಅಖಿಲ್ ಅಕ್ಕಿನೇನಿ ಮತ್ತು ರಾಮ್‌ಚರಣ್ ಸೇರಿದಂತೆ ಬಾಲಿವುಡ್ ಮತ್ತು ದಕ್ಷಿಣ ಭಾರತದ ಅನೇಕ ನಟರು ನ್ಯೂಜೆರ್ಸಿಯಲ್ಲಿ ನಡೆಯುವ ಟ್ರಂಪ್ ಪರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin