ವಾರಾಣಸಿಯಲ್ಲಿ ಕಾಲ್ತುಳಿತಕ್ಕೆ 19ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Varanasi

ವಾರಾಣಸಿ. ಅ.15 : ಪ್ರಧಾನಿ ಮೋದಿ ಪ್ರತಿನಿಧಿಸುವ ಕ್ಷೇತ್ರ ವಾರಣಾಸಿಯಲ್ಲಿ ದುರಂತವೊಂದು ಸಂಭವಿಸಿದೆ. ಧಾರ್ಮಿಕ ಯಾತ್ರೆಯೊಂದರ ವೇಳೆ ನೂಕುನುಗ್ಗಲಾಗಿ ಕಾಲ್ತುಳಿತದಿಂದ 19 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿಗೆ ಎನ್ನಲಾಗಿದೆ.  ಬಾಬಾ ಜೈ ಗುರು ದೇವ್ ಅವರನ್ನ ನೋಡಲು ಭಕ್ತರು ಮುಂದಾಗಿದ್ದು ನೂಕುನುಗ್ಗಲಿಗೆ ಕಾರಣವಾಗಿದೆ. ರಾಜಘಾಟ್ ಸೇತುವೆ ಬಳಿ ಸರಿಯಾದ ಭದ್ರತಾ ವ್ಯವಸ್ಥೆ ಇಲ್ಲದ್ದರಿಂದ ನೂಕುನುಗ್ಗಲನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಸಾವು ನೋವು ಹೆಚ್ಚಿನ ಪ್ರಮಾಣದಲ್ಲುಂಟಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin