ವಿಷ್ಣು ದಾದಾ ಅಭಿಮಾನಿಗೆ ಹೀಗಾಗಬಾರದಿತ್ತು..!

ಈ ಸುದ್ದಿಯನ್ನು ಶೇರ್ ಮಾಡಿ

Vishnuvarnda

ಬೆಂಗಳೂರು, ಅ.15- ಇಂತಹದ್ದೊಂದು ದುರಂತ ನಡೆಯಬಾರದಿತ್ತು. ಆದರೆ, ನಡೆದು ಹೋಗಿದೆ. ಇದು ವಿದಿಯಾಟ. ನಾಗರಹಾವು ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಅವರು ಎಂಟ್ರಿಯಾದ ಗಳಿಗೆಯಲ್ಲಿ ಭಾವೋದ್ವೇಗಕ್ಕೆ ಒಳಗಾದ ಸುಬ್ರಹ್ಮಣಿ ಅಲಿಯಾಸ್ ರಾಜೀವ್‍ಬಾಯ್ ಎಂಬ ದಾದಾ ಅಭಿಮಾನಿ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದಾರೆ. ಕೇವಲ 34 ವರ್ಷದ ಯುವಕನೀತ. ಜಯನಗರದ ಗರುಡಸ್ವಾಗತ್‍ನಲ್ಲಿ ಸಿನಿಮಾ ನೋಡುವಾಗ ಈ ಘಟನೆ ಸಂಭವಿಸಿದೆ. ಜಯನಗರ ಸೌಂತ್‍ಎಂಡ್ ಸರ್ಕಲ್‍ನ ಶಾಂತಿ ಚಿತ್ರಮಂದಿರ ಹಿಂಭಾಗ ಇವರ ಮನೆ ಇದೆ. ಇಂದು ಇವರ ಅಂತ್ಯಸಂಸ್ಕಾರ ನಡೆಯಲಿದೆ. ಇದು ದುರ್ಬಲ ಹೃದಯವೋ, ಅಭಿಮಾನದ ಅತಿರೇಕವೋ ಅಥವಾ ವಿಧಿಯಾಟವೋ ಒಂದೂ ತಿಳಿಯುತ್ತಿಲ್ಲ. ಒಟ್ಟಾರೆ ಅಭಿಮಾನಿಯೊಬ್ಬನ ಅಂತ್ಯವಾಗಿದೆ. ಅದಕ್ಕೆ ನೂರಾರು ಕಾರಣಗಳಿರಬಹುದು. ಸಾವಿಗೆ ಎಲ್ಲರ ನೋವಿದೆ.

► Follow us on –  Facebook / Twitter  / Google+

Facebook Comments

Sri Raghav

Admin