ಭಯೋತ್ಪಾದನೆಗೆ ಪಾಕ್ ತಾಯ್ನಾಡು : ಬ್ರಿಕ್ಸ್ ವೇದಿಕೆಯಲ್ಲಿ ಮೋದಿ ಪರೋಕ್ಷ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Brics

ಬೆನೋಲಿಯಂ (ಗೋವಾ), ಅ.16- ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಏಷ್ಯಾ ಖಂಡದ ಭದ್ರತೆಗೆ ಇದು ಬಹು ಗಂಭೀರ ಆತಂಕ ಉಂಟುಮಾಡಿದೆ. ಇದಕ್ಕೆ ಭಾರತದ ನೆರೆರಾಜ್ಯ ಮಾತೃತ್ವ ವಹಿಸಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಬ್ರಿಕ್ಸ್ ಮತ್ತು ಬ್ರಿಮ್‍ಸ್ಟೇಕ್ ರಾಷ್ಟ್ರಗಳು ಒಗ್ಗೂಡಿ ಸಂಘಟಿತ ಹೋರಾಟ ನಡೆಸಬೇಕೆಂದೂ ಅವರು ಕರೆ ನೀಡಿದ್ದಾರೆ.  ಕರಾವಳಿ ರಾಜ್ಯ ಗೋವಾದಲ್ಲಿ ಇಂದು ಬ್ರಿಕ್ಸ್ ಶೃಂಗಸಭೆಗೆ ವಿದ್ಯುಕ್ತ ಚಾಲನೆ ಮಾತನಾಡಿದ ಪ್ರಧಾನಿ, ಪಾಕಿಸ್ತಾನದ ಹೆಸರನ್ನು ನೇರವಾಗಿ ಹೇಳದೆ ಆ ರಾಷ್ಟ್ರದ ವಿರುದ್ಧ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತರಾಟೆಗೆ ತೆಗೆದುಕೊಂಡರು. ಭಯೋತ್ಪಾದನೆ ತೀವ್ರ ಸ್ವರೂಪದ್ದಾಗಿದ್ದು, ರಾಜಕೀಯ ಉದ್ದೇಶಕ್ಕಾಗಿ ಆ ದೇಶವು ಉಗ್ರಗಾಮಿ ಸಂಘಟನೆಗಳನ್ನು ಪೋಷಿಸಿ ಬೆಂಬಲಿಸುತ್ತಿದೆ ಎಂದು ಛೇಡಿಸಿದರು.

Structures of sand! National monuments of #BRICS nations carved in sand by @sudarsansand for the 8th #BRICS Summit
Structures of sand!
National monuments of #BRICS nations carved in sand by @sudarsansand for the 8th #BRICS Summit

ಭಯೋತ್ಪಾದನೆಯಿಂದ ಏಷ್ಯಾ ಪ್ರಾಂತ್ಯದಲ್ಲಿ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ದೊಡ್ಡ ಆತಂಕ ಉಂಟಾಗಿದೆ. ಭಯೋತ್ಪಾದನೆಯಿಂದ ಸಾಮಾನ್ಯ ಪ್ರಜೆಗಳಿಗೆ ಅಪಾಯ ಎದುರಾಗಿದೆ. ಭಾರತದ ನೆರೆರಾಷ್ಟ್ರವು ಇದರ ತವರೂರಾಗಿದೆ. ಈ ದೇಶವು ಕೇವಲ ಭಯೋತ್ಪಾದಕರಿಗೆ ಮಾತ್ರ ಆಶ್ರಯ ನೀಡುತ್ತಿಲ್ಲ. ಆತಂಕವಾದವನ್ನೂ ಅದು ಪೋಷಿಸಿ ಪ್ರಚೋದಿಸುತ್ತಿದೆ. ಈ ಮೂಲಕ ರಾಜಕೀಯ ಲಾಭಗಳಿಗಾಗಿ ಭಯೋತ್ಪಾದನೆಯನ್ನು ಆ ರಾಷ್ಟ್ರ ಸಮರ್ಥಿಸಿಕೊಳ್ಳುತ್ತಿದೆ ಎಂದು ಕಟುಶಬ್ದಗಳಲ್ಲಿ ಟೀಕಿಸಿದರು. ಈ ಭಯೋತ್ಪಾದನೆ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳು ಒಗ್ಗೂಡಿ ಹೋರಾಡಬೇಕಿದೆ. ಈ ಆತಂಕದ ವಿರುದ್ಧ ಒಕ್ಕೊರಲಿನಿಂದ ದನಿ ಎತ್ತಿ ಉಗ್ರವಾದವನ್ನು ದಮನ ಮಾಡಬೇಕೆಂದು ಅವರು ಮನವಿ ಮಾಡಿದರು.

ದ್ವಿಪಕ್ಷೀಯ ಚರ್ಚೆ:

ಗೋವಾದಲ್ಲಿ ನಿನ್ನೆ ಆರಂಭಗೊಂಡ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯ ಮೊದಲ ದಿವಸವೇ ಭರ್ಜರಿ ಯಶಸ್ಸು ಲಭಿಸಿದ ಬೆನ್ನಲ್ಲೇ ಭಾರತವು ಇಂದು ಏಷ್ಯಾದ ಅನೇಕ ರಾಷ್ಟ್ರಗಳೊಂದಿಗೆ ಮಹತ್ವದ ದ್ವಿಪಕ್ಷೀಯ ಸಮಾಲೋಚನೆ ನಡೆಸಿತು.  ಬ್ರಿಕ್ಸ್ ಮತ್ತು ಬ್ರಿಮ್‍ಸ್ಟೆಕ್ ಸಮಾವೇಶಗಳಲ್ಲಿ ಭಾಗವಹಿಸಲು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಭೂತಾನ್ ಪ್ರಧಾನಿ ಶೇರಿಂಗ್ ಟೊಬ್ಗೆ ಸೇರಿದಂತೆ ಏಷ್ಯಾದ ಖಂಡದ ಅಧಿಪತಿಗಳು ಇಂದು ಬೆಳಿಗ್ಗೆ ಪಣಜಿಗೆ ಆಗಮಿಸಿದರು. ಸಮಾವೇಶದ ಸ್ಥಳದಲ್ಲಿ ಈ ಅತಿಗಣ್ಯರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು.

ಎರಡನೇ ದಿನದ ಶೃಂಗಸಭೆ ಆರಂಭಕ್ಕೂ ಮುನ್ನ ಮೋದಿ ಅವರು ಶ್ರೀಲಂಕಾದ ಅಧ್ಯಕ್ಷರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಒಳಗೊಂಡಂತೆ ಮಹತ್ವದ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಇದಾದ ನಂತರ ಮೋದಿ, ಹಸೀನಾ ಶೇಕ್ ಮತ್ತು ಭೂತಾನ್ ಪ್ರಧಾನಿ ಅವರ ಜೊತೆಯೂ ಚರ್ಚಿಸಿದರು.  ಕೊನೆ ದಿನವಾದ ಇಂದು ಶೃಂಗಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.

ಪೈಪ್‍ಲೈನ್ ನಿರ್ಮಾಣಕ್ಕೆ ಒಪ್ಪಂದ:

25 ಶತಕೋಟಿ ಡಾಲರ್ ವೆಚ್ಚದಲ್ಲಿ ವಿಶ್ವದ ಅತ್ಯಂತ ದುಬಾರಿ ಕೊಳವೆ ಮಾರ್ಗ ನಿರ್ಮಾಣಕ್ಕಾಗಿ ಭಾರತ ಮತ್ತು ರಷ್ಯಾ ಇಂದು ಸಮ್ಮತಿ ನೀಡಿದೆ. ಸೈಬೀರಿಯಾದಿಂದ ಭಾರತಕ್ಕೆ ನೈಸರ್ಗಿಕ ಅನಿಲವನ್ನು ಪೂರೈಸುವ ಮಹತ್ವದ ಯೋಜನೆ ಇದಾಗಿದೆ. 4500ಕಿಲೋ ಮೀಟರ್‍ನಿಂದ 6000 ಕಿಲೋ ಮೀಟರ್ ಕೊಳವೆ ಮಾರ್ಗದ ಮೂಲಕ ಭಾರತಕ್ಕೆ ರಷ್ಯಾದ ಅನಿಲ ಸ್ಥಾವರವನ್ನು ಸಂಪರ್ಕಿಸುವ ಪೈಪ್‍ಲೈನ್ ಇದಾಗಿದ್ದು, ಇದರ ನಿರ್ಮಾಣಕ್ಕಾಗಿ ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ.

► Follow us on –  Facebook / Twitter  / Google+

Cu0Z2ycVYAAaRk7

Facebook Comments

Sri Raghav

Admin