ಕುಡಿದ ಗಲಾಟೆ ಮಾಡುತ್ತಿದ್ದ ಮಗನನ್ನು ಕೊಚ್ಚಿ ಕೊಂದ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

murder
ಬಾಗಲಕೋಟೆ, ಅ.17- ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ಹಿಂಸೆ ತಾಳಲಾರದೆ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಕಳೆದ ರಾತ್ರಿ ಹುನಗುಂದ ತಾಲ್ಲೂಕಿನ ಮುಳೂರಿನಲ್ಲಿ ನಡೆದಿದೆ.ಮೃತನನ್ನು ಪುಂಡಲೀಕ ಕೊಳಮಲಿ (34) ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಮನೆಯಲ್ಲಿ ಅಪ್ಪ-ಮಗನ ನಡುವೆ ಜಗಳ ನಡೆದಿದೆ. ಕೊಲೆ ಮಾಡಿ ನಂತರ ತಂದೆ ಪರಸಪ್ಪ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ನೆರೆ-ಹೊರೆಯವರು, ಸಂಬಂಧಿಕರು ಸಮಾಧಾನಪಡಿಸಿ ಹೊರ ಹೋದ ನಂತರ ಬಾಗಿಲು ಮುಚ್ಚಿ ಕೊಂಡಿದ್ದಾರೆ. ಈ ನಡುವೆ ಮಗ ಮತ್ತೆ ದೊಣ್ಣೆ ಹಿಡಿದು ಹಲ್ಲೆ ಮಾಡಲು ಮುಂದಾದಾಗ ಓಣಿಯಲ್ಲಿದ್ದ ಕೊಡಲಿಯಿಂದ ತಂದೆ ಪರಸಪ್ಪ ಮಗನ ಮೇಲೆ ಬೀಸಿದ್ದಾನೆ.
ತೀವ್ರವಾಗಿ ಗಾಯಗೊಂಡ ಪುಂಡಲೀಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಊರೂರು ಸುತ್ತುತ್ತಿದ್ದ ಮಗನಿಗೆ ಬುದ್ಧಿವಾದ ಹೇಳಿ ಹೊಲದಲ್ಲಿ ಕೆಲಸ ಮಾಡುವಂತೆ ಪರಸಪ್ಪ ಹೇಳುತ್ತಿದ್ದ ಇದನ್ನು ಆತ ಕೇಳದೆ ಕುಡಿತದ ಚಟ ಬೆಳೆಸಿಕೊಂಡು ಮನೆಯವರಿಗೆ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಗನಿಂದಾಗುತ್ತಿರುವ ಹಿಂಸೆಯನ್ನು ತಾಳಲಾರದೆ ನಿನ್ನೆ ಜಗಳ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮೀನ್‍ಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin