ಬ್ರಿಕ್ಸ್ ಸಮ್ಮೇಳನ ಮುಗಿದು 24 ಗಂಟೆಯೊಳಗೆ ಚೀನಾ ನರಿ ಬುದ್ಧಿ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

China0211

ನವದೆಹಲಿ. ಅ.17 : ಚೀನಾ ಮತ್ತೆ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸಿದೆ. ಬ್ರಿಕ್ಸ್ ಸಮ್ಮೇಳನ ಮುಗಿದು ಇನ್ನು 20 ಗಂಟೆ ಕಳೆಯುವ ಮೊದಲೇ ಚೀನಾ ಪರವಾಗಿ ತನ್ನ ವಾದ ಮಂಡಿಸಿದೆ. ಪಾಕಿಸ್ತಾನ ಮಹಾ ತ್ಯಾಗಮಯಿ, ಅದರ ತ್ಯಾಗವನ್ನು ನಾವು ಗೌರವಿಸಬೇಕು ಎಂದು ಪಾಕ ಪರ ತನ್ನ ನಿಲುವು ವ್ಯಕ್ತಪಡಿಸಿದೆ . ಬ್ರಿಕ್ಸ್ ಸಮಾವೇಶದಲ್ಲಿ ಚೀನಾ ಅಧ್ಯಕ್ಷರ ಸಮ್ಮುಖದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ‘ಭಯೋತ್ಪಾದನೆಯ ತವರು’ ಎಂದು ಹೇಳಿದ ನಂತರವೂ ಚೀನಾ ಪಾಕ್ ನ್ನು ಮತ್ತೆ ಸಮರ್ಥಿಸಿಕೊಂಡಿದೆ.  ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರಾದ ‘ಹುವಾ ಚಿನ್’ಯುಂಗ್’ ಪಾಕ್ ಭಯೋತ್ಪಾದಕ ದೇಶ ಎಂಬ ವಿಷಯಕ್ಕೆ ಪ್ರತಿಕ್ರಯಿಸಿ, ಯಾವುದೇ ಒಂದು ನಿರ್ದಿಷ್ಟ ದೇಶವನ್ನು, ಧರ್ಮ ಅಥವಾ ಸಮುದಾಯವನ್ನು ಉಗ್ರವಾದಕ್ಕೆ ಸಂಪರ್ಕ ಕಲ್ಪಿಸುವುದಕ್ಕೆ ಚೀನಾ ವಿರೋಧಿಸುತ್ತದೆ.’ ಪಾಕಿಸ್ತಾನ ಭಯೋತ್ಪಾದೆಯನ್ನು ಹೋಗಲಾಡಿಸಲು ಹಲವು ಪ್ರಮಗಳನ್ನು ಅನುಸರಿಸುತ್ತಿದೆ. ಅಲ್ಲದೆ ಉಗ್ರವಾದಕ್ಕೆ ದೊಡ್ಡ ತ್ಯಾಗವನ್ನು ಮಾಡಿದೆ. ನನ್ನ ಪ್ರಕಾರ ಅಂತರ ರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ತ್ಯಾಗವನ್ನು ಗೌರವಿಸಬೇಕು’ ಎಂದು ಪಾಕ್ ನ್ನು ತ್ಯಾಗಮಯಿ ಹೆಂದು ಪರೋಕ್ಷವಾಗಿ ಹೊಗಳಿದ್ದಾರೆ.

ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಒಳಗೊಂಡ ಗೋವಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಭಯೋತ್ಪಾದನೆಯು ಜಾಗತಿಕ ಪಿಡುಗಾಗಿದ್ದು, ಭಯೋತ್ಪಾದನೆಗೆ ಪಾಕಿಸ್ತಾನ ಮಾತೃಭೂಮಿಯಾಗಿದೆ. ಭಯೋತ್ಪಾದನೆ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳು ಒಗ್ಗಟ್ಟಾಗಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ರಾಷ್ಟ್ರವನ್ನು ಶಿಕ್ಷಿಸಬೇಕಿದೆ ಇದಕ್ಕೆ ಬ್ರಿಕ್ಸ್ ರಾಷ್ಟ್ರಗಳು ಒಂದಾಗಬೇಕು ಎಂದು ಹೇಳಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin