ವಾಚಮನ್ ಮೇಲೆ ಮಾರಣಾಂತಿಕ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

watchman

ವಿಜಯಪುರ,ಅ.17-ಏರ್‍ಟೇಲ್ ಟವರ್ ವಾಚ್‍ಮೆನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ 15 ಬ್ಯಾಟರಿಗಳನ್ನು ಕದ್ದೊಯ್ದಿರುವ ಘಟನೆ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಲತೇಶ್ ಹಲ್ಲೆಗೊಳಗಾದ ವಾಚ್‍ಮೆನ್. ತಾಲ್ಲೂಕಿನ ಮೂರಟಗಿ ಗ್ರಾಮದಲ್ಲಿ 15 ಜನರ ತಂಡ ಏಕಾಏಕಿ ಏರ್‍ಟೆಲ್ ಟವರ್ ಬಳಿ ಬಂದು ವಾಚ್‍ಮನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ನಂತರ ಅಲ್ಲಿ ಅಳವಡಿಸಲಾಗಿದ್ದ 15 ಬ್ಯಾಟರಿಗಳನ್ನು ಕದ್ದೊಯ್ದಿದೆ. ಬೆಲೆ ಬಾಳುವ ಈ ಬ್ಯಾಟರಿಗಳನ್ನು ಕಳವು ಮಾಡಿರುವ ಕುರಿತಂತೆ ಸಿಂದಗಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

 

► Follow us on –  Facebook / Twitter  / Google+

 

Facebook Comments

Sri Raghav

Admin