ವಿಶ್ವದ ಅತಿ ಹಿರಿಯ ಪಾಂಡ ‘ಜಿಯಾ ಜಿಯಾ’ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Jia-Jia

ಹಾಂಗ್‍ಕಾಂಗ್,ಅ.17- ವಿಶ್ವದ ಅತಿ ಹಿರಿಯ ಪಾಂಡವೆಂದೇ ಗುರುತಿಸಿಕೊಂಡಿದ್ದ ಜಿಯಾ ಜಿಯಾ ನಿನ್ನೆ ರಾತ್ರಿ ಹಾಂಗ್‍ಕಾಂಗ್‍ನ ಥೀಮ್ ಪಾರ್ಕ್‍ನಲ್ಲಿ ಕೊನೆಯುಸಿರೆಳೆದಿದೆ.ಜಿಯಾಗೆ 38 ವರ್ಷ (ಮಾನವ ಜೀವನ ಆಧಾರಿತ ಅನ್ವಯ 114 ವರ್ಷ)ವಾಗಿದ್ದು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ಆಹಾರ ಸೇವನೆಯಲ್ಲೂ ವ್ಯತ್ಯಾಸವಾಗಿತ್ತು , ನಿನ್ನೆ ಬೆಳಗ್ಗೆಯಿಂದಲೂ ನಡೆಯಲು ಕೂಡ ಜಿಯಾ ಪ್ರಯಾಸ ಪಡುತ್ತಿತ್ತು ಎಂದು ಥೀಮ್ ಪಾರ್ಕ್‍ನ ಸಿಬ್ಬಂದಿಗಳು ತಿಳಿಸಿದ್ದಾರೆ.ಆಗಸ್ಟ್‍ನಷ್ಟೇ ಜಿಯಾ ತನ್ನ 38ನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು. ವಿಶ್ವ ದಾಖಲೆಯ ಪ್ರಕಾರ ಪಾಂಡಗಳು 18 ರಿಂದ 20 ವರ್ಷಗಳ ಕಾಲ ಜೀವಿಸಬಹುದು, ಕೆಲವೊಂದು ಪಾಂಡಗಳು 30 ವರ್ಷಗಳವರೆಗೂ ಬದುಕಿದ್ದವು ಎಂದು ತಿಳಿದು ಬಂದಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin