ಕಿವೀಸ್ ವಿರುದ್ಧದ 2ನೇ ಪಂದ್ಯಕ್ಕೂ ರೈನಾ ಅಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ
Suresh Raina
Suresh Raina

ಬೆಂಗಳೂರು, ಅ.18: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಎರಡನೇ ಪಂದ್ಯದಲ್ಲೂ ಆಡುತ್ತಿಲ್ಲ. ಜ್ವರದಿಂದ ಇನ್ನೂ ಗುಣಮುಖರಾಗದ ಕಾರಣ ರೈನಾ ಅವರು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅಲಭ್ಯರಾಗಿದ್ದ ರೈನಾ ಬದಲಿಗೆ ಯಾವುದೇ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಿರಲಿಲ್ಲ. ರೈನಾ ಬದಲಿಗೆ ತಂಡದಲ್ಲಿ ಕೇದಾರ್ ಜಾಧವ್ ಆಡಿದ್ದರು. ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವಿರಾಟ್ ಕೊಹ್ಲಿ ನೇತೃತದ ಭಾರತ ತಂಡ ಗೆದ್ದುಕೊಂಡಿದೆ. ಈಗ ಕಿವೀಸ್ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿಯಲ್ಲೂ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin