ಬಡೇ ವಿವಾದದಲ್ಲಿ ಸಿಲುಕಿದ ಚೋಟೆ ಮಿಂಯಾ ಗೋವಿಂದ

ಈ ಸುದ್ದಿಯನ್ನು ಶೇರ್ ಮಾಡಿ

Govinda

ಚೋಟೆ ಮಿಂಯಾ ಎಂಬ ಬಿರುದಾಂಕಿತ ಹಿರಿಯ ನಟ ಗೋವಿಂದ ಈಗ ದೊಡ್ಡ ವಿವಾದಕ್ಕೆ ಸಿಲುಕಿದ್ದಾನೆ. ಇದರೊಂದಿಗೆ ಬಾಲಿವುಡ್‍ನ ಚಿರಯುವತಿ ಶಿಲ್ಪಾಶೆಟ್ಟಿ ಕೂಡ ಈ ಕಾಂಟ್ರೊವರ್ಸಿಯಲ್ಲಿ ಸಿಲುಕಿದ್ದಾಳೆ. ಮಾನನಷ್ಟ ಆರೋಪಗಳಿಗೂ ಈ ತಾರೆಯರು ಗುರಿಯಾಗಿದ್ದಾರೆ. ಇದಕ್ಕೆ ಕಾರಣವೇನು? ಖಂಡಿತಾ ಇದೆ.
ಗೋವಿಂದ್ ಮತ್ತು ಶಿಲ್ಪಾ ಅಭಿನಯದ ಚೋಟೆ ಸರ್ಕಾರ್ ಚಿತ್ರ 1996ರಲ್ಲಿ ತೆರೆಕಂಡಿತ್ತು. ಈ ಚಿತ್ರವೂ ಯಶಸ್ವಿ ಆಗಿತ್ತು. ಜೊತೆಗೆ ಎಕ್ ಚುಮ್ಮಾ ತು ಮುಜ್ಕೊ ಉದಾರ್ ದೆ ದೆ ಎಂಬ ಹಾಡು ಜನಪ್ರಿಯವಾಗಿ ಪಡ್ಡೆಗಳು ಗುನುಗುಟ್ಟಿದ್ದರು. ಈಗ ಇಪ್ಪತ್ತು ವರ್ಷಗಳ ಬಳಿಕ ಇದೇ ಹಾಡು ವಿವಾದದ ದೊಡ್ಡ ಸ್ವರೂಪ ಪಡೆದಿದೆ. ಈ ಹಾಡಿನಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪವಿದೆ.

ಗೋವಿಂದ ಮತ್ತು ಶಿಲ್ಪಾ ವಿರುದ್ಧ ಸ್ಥಳೀಯ ವಕೀಲರೊಬ್ಬರು ಮಾನಹಾನಿ ದಾವೆ ಹೂಡಿದ್ದಾರೆ. ಎಕ್ ಚುಮ್ಮಾ ತು ಮುಜ್ಕೊ ಉದಾರ್ ದೆ ದೆ ಬದ್ಲೆ ಮೇ ಯುಪಿ ಬಿಹಾರ್ ಲೆ ಲೆ(ಒಂದು ಮುತ್ತನು ಉದಾರವಾಗಿ ನೀಡು ಬದಲಿಗೆ ಯುಪಿ ಬಿಹಾರವನ್ನು ತೆಗೆದುಕೊ) ಎಂಬ ಅರ್ಥದ ಈ ಹಾಡಿನಲ್ಲಿ ಕೀಳು ಮಟ್ಟದ ಅಭಿರುಚಿಯಿಂದ ಈ ಎರಡೂ ರಾಜ್ಯಗಳಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಮೇ 5, 2001ರಂದು ಗೋವಿಂದ, ಶಿಲ್ಪಾ, ನಿರ್ದೇಶಕ ವಿಮಲ್ ಕುಮಾರ್, ಗಾಯಕರಾದ ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್, ಗೀತರಚನೆಕಾರ ಆನಂದ್ ಮಿಳಿಂದ್ ಹಾಗೂ ಸಂಗೀತ ನಿರ್ದೇಶಕ ರಾಣಿ ಮಲ್ಲಿಕ್ ಅವರುಗಳ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಲಾಗಿತ್ತು. ನ್ಯಾಯಾಲಯದ ಮೆಟ್ಟಿಲೇರಿದ ಈ ವಿವಾದದ ಬಗ್ಗೆ ವಾದ-ಪ್ರತಿವಾದಗಳು ಮುಂದುವರಿದಿವೆ.

ನಾಳೆ, ಅಂದರೆ ಅ.18ರಂದು ಜಾರ್ಖಂಡ್‍ನ (ಆಗ ಬಿಹಾರದಲ್ಲಿದ್ದ ಒಂದು ಭಾಗ ಹೊಸ ರಾಜ್ಯವಾಗಿ ಹೊರಹೊಮ್ಮಿದೆ) ಪಕುರ್ ನ್ಯಾಯಾಲಯವೊಂದರಲ್ಲಿ ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin