‘ಸರ್ಕಾರ್-3’ ನಲ್ಲಿ ಬಚ್ಚನ್ ಜೊತೆ ಯಾರ್ಯಾರಿರ್ತಾರೆ..?

ಈ ಸುದ್ದಿಯನ್ನು ಶೇರ್ ಮಾಡಿ

Sarkar-3

ಅಮಿತಾಭ್ ಬಚ್ಚನ್-ವಯಸ್ಸಿಗೆ ತಕ್ಕಂತೆ ಪ್ರೌಢತೆಯ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ 75ರ ಹರೆಯಲ್ಲೂ ತಮ್ಮ ವರ್ಚಸ್ಸು ಉಳಿಸಿಕೊಂಡಿರುವ ಧೀಮಂತ ಅಭಿನೇತ. ರಾಮ್‍ಗೋಪಾಲ್ ವರ್ಮ ನಿರ್ದೇಶನದ ಸರ್ಕಾರ್-3 ಸಿನಿಮಾದಲ್ಲಿ ನಟಿಸಲಿರುವ ಬಿಗ್-ಬಿ ಜೊತೆ ಪ್ರತಿಭಾವಂತ ನಟ-ನಟಿಯರೂ ಆಯ್ಕೆಯಾಗಿದ್ದಾರೆ. ಆರ್‍ಜಿವಿ ಪವರ್‍ಫುಲ್ ಸ್ಟಾರ್‍ಕ್ಯಾಸ್ಟ್‍ನನ್ನು ಟ್ವೀಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಅವರ ಹೆಸರು, ಪಾತ್ರ, ಪಾತ್ರದ ವಿಶೇಷತೆ ಇವೇ ಮೊದಲಾದ ಸಂಗತಿಗಳನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಸರ್ಕಾರ್ ಸಿನಿಮಾದ ಹಿಂದಿನ ಸರಣಿಯಂತೆ ಬಚ್ಚನ್ ಇದರಲ್ಲೂ ಸುಭಾಷ್ ನಾಗ್ರೆ (ಬಾಳ್ ಠಾಕ್ರೆ ಪ್ರೇರಣೆ) ಪಾತ್ರದಲ್ಲಿ ಮಿಂಚಲಿದ್ದಾರೆ.ಸರ್ಕಾರ್-3ರಲ್ಲಿರುವ ಇತರ

ತಾರಾಬಳಗವೆಂದರೆ :

ಜಕಿ ಶ್ರಾಫ್, ರೋಹಿಣಿ ಹಟ್ಟಂಗಡಿ, ಮನೋಜ್ ಬಾಜಪೇಯಿ, ರೋನಿತ್ ರಾಯ್, ಭರತ್ ಧಾಬೋಲ್ಕರ್, ಅಮಿತ್ ಸಧ್ ಮತ್ತು ಯಾಮಿ ಗೌತಮ್. ಈ ಹಿಂದೆ ರಂಗೀಲಾದಲ್ಲಿ ಆರ್‍ಜಿವಿ ಜೊತೆ ಕೆಲಸ ಮಾಡಿದ್ದ ಜಕಿ ಶ್ರಾಫ್ ಸರ್ಕಾರ್-3ನಲ್ಲಿ ಮುಖ್ಯ ಭೂಮಿಕೆಯನ್ನು ನಿರ್ವಹಿಸುತ್ತಿದ್ದಾರೆ. ವರ್ಮರ ಸತ್ಯ ಚಿತ್ರದಲ್ಲಿ ಗಮನಸೆಳೆದಿದ್ದ ಬಾಜಪೇಯಿ ಇದರಲ್ಲಿ ಗೋವಿಂದ ದೇಶಪಾಂಡೆ (ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್) ಪಾತ್ರ. ರೋನಿತ್ ಸರ್ಕಾರ್ ಬಲಗೈ ಬಂಟ ಗೋಕುಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದಲ್ಲೇ ಮುಂಬೈ ಮತ್ತು ವಿದೇಶದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin