RSS ಕಾರ್ಯಕರ್ತ ರುದ್ರೇಶ್‍’ನನ್ನ ಕೊಂದಿದ್ದು ಕೇರಳದ ಸುಪಾರಿ ಕಿಲ್ಲರ್ಸ್…?

ಈ ಸುದ್ದಿಯನ್ನು ಶೇರ್ ಮಾಡಿ

Rudresh-Murder

ಬೆಂಗಳೂರು, ಅ.18-ಅಬ್ಬಾಬ್ಬ… ಈ ರೀತಿಯ ಹತ್ಯೆ ಬೆಂಗಳೂರಿನಲ್ಲಿ ಹಿಂದೆಂದೂ ನಡೆದಿರಲಿಲ್ಲ. ಹಂತಕರು ಯಾವ ರೀತಿ ಹತ್ಯೆ ಮಾಡಿದ್ದರು ಎಂದರೆ, ಮಾರಮ್ಮನ ಹಬ್ಬಕ್ಕೆ ಮೇಕೆ ಬಲಿಕೊಡುವ ರೀತಿ ಒಂದೇ ಏಟಿಗೆ ರುದ್ರೇಶ್ ಕುತ್ತಿಗೆಗೆ ಲಾಂಗ್ ಬೀಸಿದ್ದರು. ಕಟುಕರ ಲಾಂಗ್ ಏಟಿಗೆ ರುದ್ರೇಶ್ನ ತಲೆ ಎಗರಿ ಹೋಗಬೇಕಿತ್ತು. ಆದರೆ ಮುಕ್ಕಾಲು ಭಾಗ ಕತ್ತರಿಸಿ ಹೋಗಿತ್ತು. ಈ ರೀತಿಯ ಹತ್ಯೆ ಮಾಡಿರುವುದನ್ನು ನೋಡಿದರೆ ವೃತ್ತಿಪರ ಹಂತಕರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಕೊಲೆಗಡುಕರು ಕಂಡು ಬರುವುದು ದೇವರ ನಾಡಾದ ಕೇರಳದಲ್ಲಿ ಮಾತ್ರ. ಈ ಸುಳಿವಿನ ಬೆನ್ನಹತ್ತಿರುವ ಒಂದು ವಿಶೇಷ ಪೊಲೀಸ್ ತಂಡ ಈಗಾಗಲೇ ಕೇರಳಕ್ಕೆ ದೌಡಾಯಿಸಿದ್ದು, ಹಂತಕರಿಗಾಗಿ ಶೋಧ ಮುಂದುವರೆಸಿದೆ.

ಗಣವೇಷಧಾರಿಯಾಗಿ ರಸ್ತೆ ಬದಿಯ ಟೀ ಅಂಗಡಿಯ ಬಳಿ ಚಹಾ ಸೇವಿಸುತ್ತಿದ್ದಾಗ ಬೈಕ್ನಲ್ಲಿ ಹೆಲ್ಮೆಟ್ ಧರಿಸಿದ್ದ ಸವಾರ ಹಾಗೂ ಮಂಕಿ ಕ್ಯಾಪ್ ಧರಿಸಿದ್ದ ಹಿಂಬದಿ ಸವಾರ ಬೀಸಿದ ಲಾಂಗ್ ರುದ್ರೇಶ್ನ ಕುತ್ತಿಗೆಗೆ ಸರಿಯಾಗಿ ಬಿದ್ದಿತ್ತು.  ಇಂತಹ ವೃತ್ತಿಪರ ಕೊಲೆಗಡುಕರು ನಡೆಸುವ ಹಲ್ಲೆಯಿಂದ ಎಂಥವರು ಬದುಕುಳಿಯಲು ಸಾಧ್ಯವೇ ಇಲ್ಲ ಎನ್ನುವುದು ಪೊಲೀಸರ ವ್ಯಾಖ್ಯಾನ.
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರುದ್ರೇಶ್ನನ್ನು ಮುಗಿಸಲೇಬೇಕು ಎಂಬ ಉದ್ದೇಶದಿಂದಲೇ ಎದುರಾಳಿಗಳು ವೃತ್ತಿಪರ ಹಂತಕರಿಗೆ ಸುಪಾರಿ ನೀಡಿರುವ ಸಾಧ್ಯತ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ನ ಹತ್ಯೆಗೆ ಶಾರ್ಪ್ ಶೂಟರ್ಗೆ ಸುಪಾರಿ ನೀಡಿದರೆ ಅವರು ಬಳಸುವ ಬುಲೆಟ್ ಆಧಾರದ ಮೇಲೆ ಕೊಲೆಗಡುಕರು ಪೊಲೀಸರಿಗೆ ಸಿಕ್ಕಿ ಬಿದ್ದರೆ ಎಲ್ಲಿ ತಮ್ಮ ಬಂಡವಾಳ ಬಯಲಾಗುವುದೋ ಎಂಬ ಭೀತಿಯಿಂದ ಎದುರಾಳಿಗಳು ವೃತ್ತಿಪರ ಹಂತಕರ ಮೊರೆ ಹೋಗಿದ್ದಾರೆ. ಹಂತಕರು ಕೊಲೆ ಮಾಡಿ ಪರಾರಿಯಾದ ನಂತರ ಯಾವುದೇ ಸುಳಿವು ಬಿಟ್ಟು ಹೋಗದೆ ಇರುವುದು ಅವರ ವೃತ್ತಿಪರತೆಗೆ ಸಾಕ್ಷಿಯಂತಿದೆ. ಆದರೆ ಹತ್ಯೆ ನಡೆದಿರುವ ಶೈಲಿಯಿಂದಷ್ಟೇ ಹಂತಕರು ಕೇರಳ ಮೂಲದವರು ಇರಬಹುದು ಎಂಬ ಸಣ್ಣ ಸುಳಿವು ಮಾತ್ರ ಪೊಲೀಸರಿಗೆ ದೊರೆತಿದೆ. ಈ ಸುಳಿವಿನ ಆಧಾರದ ಮೇಲೆ ದೇವರ ನಾಡಿಗೆ ತೆರಳಿರುವ ಪೊಲೀಸರ ತಂಡ ಹಂತಕರಿಗಾಗಿ ಜಾಲ ಬೀಸಿದೆ. ಪೊಲೀಸರ ಗಾಳಕ್ಕೆ ವೃತ್ತಿಪರ ಹಂತಕರು ಸಿಕ್ಕಿ ಬೀಳುವರೇ, ಇಲ್ಲವೇ ಕಾದುನೋಡಬೇಕು.

► Follow us on –  Facebook / Twitter  / Google+

Facebook Comments

Sri Raghav

Admin