ಗಮನ ಬೇರೆಡೆ ಸೆಳೆದು ಬ್ಯಾಂಕ್‍ನಲ್ಲೇ ಹಣ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

bank

ಚಿಂತಾಮಣಿ, ಅ.19- ನಗರದ ಕರ್ನಾಟಕ ಬ್ಯಾಂಕ್‍ನಲ್ಲಿ ಕ್ಯಾಷ್ ಕೌಂಟರ್ ಬಳಿ ಗ್ರಾಹಕನ ಗಮನ ಬೇರೆಡೆ ಸೆಳೆದು 32ಸಾವಿರ ರೂ. ಹಣ ಲಪಟಾಯಿಸಿರುವ ಘಟನೆ ನಡೆದಿದೆ.ರಾಜಣ್ಣ 2 ಲಕ್ಷ ಹಣ ಪಡೆಯುತ್ತಿದ್ದಾಗ ಹಣ ಕಟ್ಟುವ ಸರದಿಯಲ್ಲಿ ನಿಂತಿದ್ದ ಆಸಾಮಿಯೊಬ್ಬ ನಕಲಿ ಹಾಗೂ ಹರಿದನೋಟುಗಳು ಇರುತ್ತದೆ ನೋಡಿಕೊಳ್ಳಿ ಎಂದು ಹೇಳುತ್ತಾ ಅವರ ಗಮನ ಬೇರೆಡೆ ಸೆಳೆದು 32 ಸಾವಿರ ದೋಚಿ ಪರಾರಿಯಾಗಿರುದ್ದಾನೆ. ನಗರದ ಬೆಂಗಳೂರು ರಸ್ತೆಯ ಅಶ್ವಿನಿ ಬಡಾವಣೆಯ ನಿವಾಸಿ ರಾಜಣ್ಣ ಕರ್ನಾಟಕ ಬ್ಯಾಂಕ್‍ನಲ್ಲಿ 2 ಲಕ್ಷ ರುಪಾಯಿ ಚೆಕ್ಕನ್ನು ಕೌಂಟ್‍ರನಲ್ಲಿ ನೀಡಿ ಟೋಕನ್ ಪಡೆದು ಹಣವನ್ನು ಪಡೆಯಲು ಸರದಿಯಲ್ಲಿ ನಿಂತಿದ್ದರು.

ಕ್ಯಾಷಿಯರ್ ಟೋಕನ್ ನಂಬರ್ ಕರೆದು 100 ರೂ. 1000 ರೂ. ಮುಖ ಬೆಲೆಯ ಹಣವನ್ನು ನೀಡಿದಾಗ ಗ್ರಾಹಕ ರಾಜಣ್ಣ ತನಗೆ 1000 ರೂಗಳ ನೋಟನ್ನು ಕೊಡಲು ಕ್ಯಾಷಿಯರ್ ಬಳಿ ವಿನಂತಿಸಿದರು. ಆದರೆ ಕ್ಯಾಷಿಯರ್ ಗ್ರಾಹಕನ ವಿನಂತಿಯನ್ನು ಪರಿಗಣಿಸದೆ ತಾನು ಕೊಟ್ಟ ಡಿನಾಮಿನೇಷನ್ ಪಡೆಯಲು ಆಗ್ರಹಿಸಿದ್ದಾನೆ. ಕನಿಷ್ಠ ಪಕ್ಷ ಹಣವನ್ನು ಎಣಿಕೆ ಮಿಷಿನ್ ಒಳಗೆ ಇಟ್ಟು ಗಣನೆ ಮಾಡಲು ಗ್ರಾಹಕರು ಕೋರಿದಾಗ ಯಂತ್ರ ಕೆಟ್ಟುಹೋಗಿದ್ದು ಕೊಟ್ಟ ಹಣವನ್ನು ತೆಗೆದುಕೊಂಡು ಹೋಗುವಂತೆ ಕ್ಯಾಷಿಯರ್ ತಾಕೀತು ಮಾಡಿದ್ದಾನೆ. ವಿಧಿ ಇಲ್ಲದೆ ಕ್ಯಾಷಿಯರ್ ಕೊಟ್ಟ ಹಣವನ್ನು ರಾಜಣ್ಣ ಕೌಂಟರ್ ಪಕ್ಕದಲ್ಲೇ ಹಣವನ್ನು ಎಣಸಿಕೊಳ್ಳಲು ಮುಂದಾಗಿದ್ದಾನೆ.

ಇದೆಲ್ಲಾವನ್ನು ಸರತಿ ಸಾಲಿನಲ್ಲಿ ನಿಂತು ವೀಕ್ಷಿಸುತ್ತಿದ್ದ ಅಪರಚಿತ ಅಸಾಮಿಯೊಬ್ಬ ಸರತಿ ಸಾಲಿನಿಂದ ಹೊರ ಬಂದು ಹಣ ಎಣಿಕೆ ಮಾಡುತ್ತಿದ್ದು ರಾಜಣ್ಣ ಪಕ್ಕದಲ್ಲೇ ಕುಳಿತು ಕ್ಯಾಷಿಯರ್ ಹರಿದ ನೋಟ್‍ಗಳ ಜೊತೆಗೆ ನಕಲಿ ನೋಟುಗಳು ಇರುತ್ತವೆ ಇಲ್ಲಿ ಎಣಿಕೆ ಮಾಡಿಕೊಂಡು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಿದ್ದಾನೆ.ರಾಜಣ್ಣ ಅವನ ಮಾತು ಕೇಳಿ ಹಣ ಎಣಿಸುವಾಗ ಪಕ್ಕದಲ್ಲಿ ಕುಳಿತ್ತಿದ್ದ ಅಪರಚಿತ ಅಸಾಮಿ ತಾನು ಸಾವಿರ ರೂಗಳ ನೋಟ್‍ಗಳನ್ನು ಎಣಿಸಿಕೊಡುವುದಾಗಿ ಹೇಳಿ 32 ಸಾವಿರ ರೂ.ಗಳನ್ನು ಲಪಟಾಯಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಅಸಾಮಿ ವಾಪಸ್ಸು ನೀಡಿದ ಸಾವಿರ ನೋಟು ಎಣಿಕೆ ಮಾಡಿದಾಗ 32 ನೋಟ್‍ಗಳು ಕಾಣೆಯಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin