ಜೂಜು ಅಡ್ಡೆ ಮೇಲೆ ದಾಳಿ 7ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrested

ಚನ್ನಪಟ್ಟಣ, ಅ.19- ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದ ನಗರ ಪೊಲೀಸರು ಪಣಕ್ಕಿಟ್ಟಿದ್ದ 1327 ರೂ. ಹಣ ವಶಪಡಿಸಿಕೊಂಡು 7 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಕಾಟೇಜ್ ಬಳಿ ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಠಾಣೆಯ ಪಿಎಸ್‍ಐ ಪ್ರಕಾಶ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ. ಬಂಧಿತರನ್ನು ಖಲೀಲ್ ಎಸ್.ಬಾಬು , ಖಲೀಲ್ ಅಕ್ಬರ್‍ಖಾನ್, ಬಾಬು, ನಯಾಜ್, ಜಬಿಖಾನ್ ಎಂದು ತಿಳಿದು ಬಂದಿದ್ದು, ಇಂದಿರಾ ಕಾಟೇಜ್ ಹಾಗೂ ಸುತ್ತಮುತ್ತಲಿನ ಸ್ಥಳದವರಾದ ಇವರು ಪ್ರತಿನಿತ್ಯ ಇದೇ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದಾರೆಂದು ಹೇಳಲಾಗಿದೆ.ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು ಅವರೆಲ್ಲಾ ಜಾಮೀನಿನ ಮೇಲೆ ಬಿಡುಗಡೆ ಪಡೆದಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin