ಬ್ಯಾಂಕ್ ಗೆ ತುಂಬಲು ತಂದಿದ್ದ ಬೈಕ್ ಡಿಕ್ಕಿಯಲ್ಲಿಟ್ಟಿದ್ದ 10.70 ಲಕ್ಷ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

robbry

ಬೆಂಗಳೂರು, ಅ.19-ಬೈಕ್ ಡಿಕ್ಕಿ ತೆರೆದು ಅದರಲ್ಲಿಟ್ಟಿದ್ದ 10.70 ಲಕ್ಷ ರೂ. ದೋಚಿರುವ ಘಟನೆ ಜೆಪಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಂಪೆನಿಯೊಂದರ ನೌಕರ ಸುಜನ್‍ರಾಮ್ ಎಂಬುವರು ನಿನ್ನೆ ಮಧ್ಯಾಹ್ನ ಬ್ಯಾಂಕ್‍ಗೆ ಹಣ ಪಾವತಿಸಲೆಂದು ತಮ್ಮ ಬೈಕ್ ಡಿಕ್ಕಿಯಲ್ಲಿ 10.70 ಲಕ್ಷ ರೂ. ಇಟ್ಟುಕೊಂಡು ಚುಂಚನಘಟ್ಟ ಮುಖ್ಯರಸ್ತೆ ಬಳಿ ಬಂದು ಬೈಕ್ ಪಾರ್ಕಿಂಗ್ ಮಾಡಿ ಸಮೀಪದ ಎಟಿಎಂಗೆ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಇವರ ಬೈಕ್‍ನ ಡಿಕ್ಕಿ ತೆರೆದು ಅದರಲ್ಲಿದ್ದ 10.70 ಲಕ್ಷ ರೂ. ಕದ್ದೊಯ್ದಿದ್ದಾರೆ.

ಕೆಲ ಸಮಯದ ಬಳಿಕ ವಾಪಸ್ ಬಂದ ಸುಜನ್‍ರಾಮ್ ಬೈಕ್‍ನ ಡಿಕ್ಕಿ ತೆರೆದಿರುವುದು ಗಮನಿಸಿದಾಗ ಅದರಲ್ಲಿದ್ದ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಜೆ.ಪಿ.ನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ರುವ ಪೊಲೀಸರು ತನಿಖೆ ಮುಂದುವರ ಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin