ಬ್ಯಾಹಾಕಾಶ ಪ್ರವೇಶಿಸಿದ ಚೀನಿ ಗಗನಯಾತ್ರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

China01

ಬೀಜಿಂಗ್, ಅ.19-ಇಬ್ಬರು ಖಗೋಳಯಾತ್ರಿಗಳಿದ್ದ ಚೀನಾದ ಶೆಂಝೌ-11 ಅಂತರಿಕ್ಷ ನೌಕೆ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಸುರಕ್ಷಿತವಾಗಿ ಇಳಿದಿದೆ. ವ್ಯೂಮಾ ಪ್ರಯೋಗಾಲಯದ ಕಕ್ಷೆಗೆ ದೂರ-ನಿಯಂತ್ರಿತ ಸ್ವಯಂಚಾಲಿತ ಕಾರ್ಯಾಚರಣೆ ಮೂಲಕ ನೌಕೆಯನ್ನು ಇಳಿಸಲಾಗಿದೆ ಎಂದು ಬೀಜಿಂಗ್ ಏರೋಸ್ಪೇಸ್ ಕಂಟ್ರೋಲ್ ಸೆಂಟರ್ (ಬಿಎಸಿಸಿ) ತಿಳಿಸಿದೆ. ನೌಕೆಯು ಯಶಸ್ವಿಯಾಗಿ ಇಳಿದ ನಂತರ ಟಿಯಾಂಗಾಂಗ್-2 ಬಾಹ್ಯಾಕಾಶ ಪ್ರಯೋಗಾಲಯದ ಒಳಗೆ ಇಬ್ಬರು ಗಗನಯಾತ್ರಿಗಳಾದ ಜಿಂಗ್ ಹೈಪೆಂಗ್ ಮತ್ತು ಚೆನ್ ಡಾಂಗ್ ಪ್ರವೇಶಿಸಿದರು ಹಾಗೂ ಬೆಳಗಿನ ಜಾವ 1 ಗಂಟೆಯಲ್ಲಿ ಸ್ವಯಂಚಾಲಿತ ಇಳಿಸುವ ಕಾರ್ಯಾಚರಣೆ ಪೂರ್ಣಗೊಂಡಿತು. ಇಬ್ಬರು ಗಗನಯಾತ್ರಿಗಳು 30 ದಿನಗಳವರೆಗೆ ಲ್ಯಾಬ್‍ನಲ್ಲಿ ಕಾರ್ಯನಿರ್ವಹಿಸಲಿದ್ಧಾರೆ ಎಂದು ವೈಮಾಂತರಿಕ್ಷ ನಿಯಂತ್ರಣ ಕೇಂದ್ರ ಹೇಳಿದೆ.

ಇಬ್ಬರು ಖಗೋಳಯಾತ್ರಿಗಳಿದ್ದ ಚೀನಾದ ಶೆಂಝೌ-11 ಅಂತರಿಕ್ಷ ನೌಕೆಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿತ್ತು. ಉಡಾವಣೆ ನಂತರ ಲಾಂಗ್ ಮಾರ್ಚ್-2ಎಫ್ ಕ್ಯಾರಿಯರ್ ರಾಕೆಟ್‍ನಿಂದ ಈ ಗಗನನೌಕೆ ಅಂತರಿಕ್ಷ ಕಕ್ಷೆಗೆ ಸೇರ್ಪಡೆಯಾಗಿತ್ತು. ಮಾನವಸಹಿತ ನೌಕೆಯನ್ನು ಉಡಾವಣೆ ಮಾಡುವ ಮೂಲಕ 2022ರ ವೇಳೆಗೆ ತನ್ನದೇ ಆದ ಶಾಶ್ವತ ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಯ ಕನಸನ್ನು ಸಾಕಾರಗೊಳಿಸುವ ದಿಕ್ಕಿನತ್ತ ಚೀನಾ ಸಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin