ಲಾರಿ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ : ಬಸ್ ಚಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

deadly--accident

ತುಮಕೂರು, ಅ.19-ಮುಂದೆ ಹೋಗುತ್ತಿದ್ದ ಲಾರಿ ದಿಢೀರನೆ ಎಡಬದಿಗೆ ಹೋದಾಗ ಹಿಂದೆ ಬರುತ್ತಿದ್ದ ಖಾಸಗಿ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಘಟನೆಯಲ್ಲಿ ಚಂದ್ರಹಾಸ್ (29) ಸಾವನ್ನಪ್ಪಿರುವ ಬಸ್ ಚಾಲಕನ್ನಗಿದ್ದು, ಬಸ್‍ನಲ್ಲಿದ್ದ 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.ಇಬ್ಬರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಇವರನ್ನು ಬೆಂಗಳೂರಿನ ನಿಮಾನ್ಸ್‍ಗೆ ದಾಖಲಿಸಲಾಗಿದ್ದು, ಇವರ ವಿಳಾಸ ತಿಳಿದು ಬಂದಿಲ್ಲ.ರಾಷ್ಟ್ರೀಯಹೆದ್ದಾರಿ 4ರ ಜಾಸ್‍ಟೋಲ್ ಸಮೀಪ ಇಂದು ಮುಂಜಾನೆ 5.10ರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ದೇಹ ಬಸ್ ಮುಂಭಾಗ ಮತ್ತು ಲಾರಿ ಹಿಂಭಾಗದ ಮಧ್ಯೆ ಕಬ್ಬಿಣದ ಸರಳಿಗೆ ಸಿಕ್ಕಿಹಾಕಿಕೊಂಡಿತ್ತು.

ಟ್ರಾಫಿಕ್ ಜಾಮ್:
ಅಪಘಾತದಿಂದಾಗಿ ಈ ಮಾರ್ಗದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವಾಹನಗಳು ಸುಮಾರು 8 ಕಿ.ಮೀ. ದೂರದವರೆಗೂ ನಿಂತಿದ್ದರಿಂದ ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.ಈ ವೇಳೆ ನೌಕರರು, ವಿದ್ಯಾರ್ಥಿಗಳು ಶಾಲೆ ಹೋಗಲು ತೊಂದರೆ ಅನುಭವಿಸಬೇಕಾಯಿತು. ಅಲ್ಲದೆ ಆಂಬುಲೆನ್ಸ್ ಸಹ ಅಪಘಾತ ಸ್ಥಳ ತಲುಪಲು ಪರದಾಡುವಂತಾಯಿತು. ಸ್ಥಳಕ್ಕೆ ನಗರದ ಡಿವೈಎಸ್‍ಪಿ ಚಿದಾನಂದಸ್ವಾಮಿ, ವೃತ್ತ ನಿರೀಕ್ಷಕ ಗಂಗಲಿಂಗಯ್ಯ, ಪೂರ್ವ ವಿಭಾಗದ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಣ್ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಕೈಗೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿಗಳು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವಲ್ಲಿ ನೆರವಾದರೂ ಹಾಗೂ ಮೃತದೇಹ ಹೊರತೆಗೆಯುವ ಹರಸಾಹಸಪಟ್ಟರು.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin