ಹಾಲಿವುಡ್ ಅಂಗಳದಲ್ಲೂ ‘ಹಾಟ್’ ದೀಪಿಕಾ ಸದ್ದು

ಈ ಸುದ್ದಿಯನ್ನು ಶೇರ್ ಮಾಡಿ

hOT
‘xXx: Return of Xander Cage’
ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಹಾಲಿವುಡ್ ಅಂಗಳದಲ್ಲೂ ಸುದ್ಧಿಯ ಸದ್ದು ಮಾಡುತ್ತಿದ್ದಾಳೆ. ಡಿಪ್ಪೀ ಜಗದ್ವಿಖ್ಯಾತ ನಟಿಯಾಗುವ ಕಾಲ ದೂರವಿಲ್ಲ ಎಂಬುದಕ್ಕೆ ನಿನ್ನೆ ಬಿಡುಗಡೆಯಾದ ಈ ಚಿತ್ರದ ಎರಡನೇ ಟ್ರೈಲರ್ ಸಾಕ್ಷಿಯಾಗಿದೆ. ಸ್ಟಂಟ್ ಮತ್ತು ರೊಮಾನ್ಸ್ ದೃಶ್ಯಗಳೆರಡಲ್ಲೂ ಮೈ ಚಳಿ ಬಿಟ್ಟು ನಟಿಸಿರುವ ನೀಳಕಾಯದ ಈ ಬೆಡಗಿ ಟ್ರೈಲರ್‍ನಲ್ಲಿ ಸಖತ್ ಹಾಟೀಯಾಗಿದ್ದಾಳೆ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ. ಹಾಲಿವುಡ್ ನಟ ವಾನ್ ಡಿಸೇಲ್ ಮತ್ತು ದೀಪಿಕಾ ನಟನೆಯ ಈ ಸಿನಿಮಾದ ಮೊದಲ ಟ್ರೈಲರ್‍ನಲ್ಲಿ ಇಂಡಿಯನ್ ಬ್ಯೂಟಿಯ ಕೆಲವು ತುಣುಕುಗಳು ಮಾತ್ರ ಇಣುಕಿದ್ದವು. ಆದರೆ ಎರಡನೇ ಟ್ರೈಲರ್‍ನಲ್ಲಿ ಡಿಪ್ಪಿಯ ಸ್ಟಂಟ್ ಮತ್ತು ರೊಮಾನ್ಸ್ ದೃಶ್ಯಗಳ ಹಾಟ್ ಹಾಟ್ ಸೀನ್‍ಗಳು ಅನಾವರಣಗೊಂಡಿವೆ.

ಬಿಡುಗಡೆಗೆ ಮುನ್ನವೇ ಚಿತ್ರ ರಸಿಕರಲ್ಲಿ ಅಪಾರ ಸಂಚಲನ ಮೂಡಿಸಿರುವ ಈ ಚಿತ್ರದ ಎರಡನೇ ಟ್ರೈಲರ್ ಮತ್ತಷ್ಟು ಕುತೂಹಲ ಕೆರಳಿಸಿದೆ.  ಈ ಸಿನಿಮಾ ಡಿಪ್ಪಿಗೆ ದೊಡ್ಡ ಮಟ್ಟದ ಬ್ರೇಕ್ ನೀಡಲಿದ್ದು, ಸುದೀರ್ಘ ಕಾಲ ಹಾಲಿವುಡ್‍ನಲ್ಲಿ ಮಿಂಚಲಿದ್ದಾಳೆ, ಅಲ್ಲದೇ ಪಿಗ್ಗಿ ಅಲಿಯಾಸ್ ಪ್ರಿಯಾಂಕ ಚೋಪ್ರಾಳಿಗೂ ಸೆಡ್ಡು ಹೊಡೆಯಲಿದ್ದಾಳೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಾರೆ ‘xXx: Return of Xander Cage’ ಚಿತ್ರದಲ್ಲಿ ಡಿಪ್ಪಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin