ಕೋಳಘಟ್ಟ ಗ್ರಾಮದ ಸುತ್ತಮುತ್ತ ಅಡ್ಡಾಡುತ್ತಿರುವ ಚಿರತೆಗಳು

ಈ ಸುದ್ದಿಯನ್ನು ಶೇರ್ ಮಾಡಿ

chirate

ತುರುವೇಕೆರೆ, ಅ.20- ಹಲವು ದಿನಗಳಿಂದ ತಾಲೂಕಿನ ಕೋಳಘಟ್ಟ ಗ್ರಾಮ ವ್ಯಾಪ್ತಿಯಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಗ್ರಾಮದ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಳಘಟ್ಟ ಗ್ರಾಮದರೊಬ್ಬರು ಕಾರಿನಲ್ಲಿ ಬರುವಾಗ ರಸ್ತೆ ಅಡ್ಡಲಾಗಿ ಚಿರತೆಗಳು ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಪ್ರತಿದಿನ ಗ್ರಾಮದ ಸುತ್ತಾ ಮುತ್ತಾ ಅಡ್ಡಾಡಿಕೊಂಡು ಗ್ರಾಮಸ್ಥರಿಗೆ ಕಣ್ಣಿಗೆ ಬೀಳುತ್ತಿವೆ. ಗ್ರಾಮಸ್ಥರು ತೋಟಗಳಿಗೂ ತೆರಳದೆ ಹೆದರಿ ಮನೆಯಲ್ಲಿ ಕೂರುವಂತಾಗಿದೆ.ಅದಲ್ಲದೆ ರಾತ್ರಿ ವೇಳೆ ಬೇರೆ ಮನೆಬಿಟ್ಟು ಹೊರ ಹೋಗದಂತಹ ಪರಿಸ್ಥಿತಿ ಇದ್ದು, ಈ ಬಗ್ಗೆ ಅರಣ್ಯ ಇಲಾಖೆವರಿಗೆ ತಿಳಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚಿರತೆಗಳನ್ನು ಹಿಡಿದು ಜನರಿಗೆ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin