ನಜಾಫ್‍ಗಢದ ನವಾಬನಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರ

ಈ ಸುದ್ದಿಯನ್ನು ಶೇರ್ ಮಾಡಿ

virendra

ನವದೆಹಲಿ, ಅ. 20- ನಜಾಫ್‍ಗಢದ ಸಚಿನ್ ಎಂದೇ ಗುರುತಿಸಿಕೊಂಡಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇಂದು ತಮ್ಮ 38ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಪಂದ್ಯಕ್ಕೆ ವೀಕ್ಷಕ ವಿವರಣೆಗಾರನಾಗಿ ರುವ ಸೆಹ್ವಾಗ್ ಭಾರತ ತಂಡದ ಆಟಗಾರರೊಂದಿಗೆ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದು ಅವರಿಗೆ ಬಿಸಿಸಿಐ ಶುಭಾಶಯಗಳನ್ನು ಕೋರಿದ್ದಾರೆ.ಇವರೇ ಅಲ್ಲದೇ ಭಾರತ ತಂಡದ ತರಬೇತುದಾರ ಅನಿಲ್‍ಕುಂಬ್ಳೆ , ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಹಾಗೂ ತಮ್ಮ ಅಪಾರ ಅಭಿಮಾನಿಗಳು ಟ್ವಿಟ್ಟರ್ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

1999ರಲ್ಲಿ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಸೆಹ್ವಾಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ವೈಖರಿಯಿಂದ ವಿಶ್ವದ ಶ್ರೇಷ್ಠ ಬೌಲರ್‍ಗಳನ್ನು ಕಾಡಿದ್ದರು.104 ಟೆಸ್ಟ್ ಪಂದ್ಯಗಳಿಂದ 8586 ರನ್ (23 ಶತಕ, 32 ಅರ್ಧಶತಕ), 19 ಟ್ವೆಂಟಿ- 20 ಪಂದ್ಯಗಳಿಂದ 394 ರನ್ ಹಾಗೂ 251 ಏಕದಿನ ಪಂದ್ಯಗಳಿಂದ 8273 ರನ್ ( 15 ಶತಕ, 38 ಅರ್ಧಶತಕ) ಗಳಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin