ಬಾಲಿವುಡ್‍ನಲ್ಲಿ ತಪ್ಪಿದ ತಾರಾ ಸಮರ

ಈ ಸುದ್ದಿಯನ್ನು ಶೇರ್ ಮಾಡಿ

Vidya-Balan

ಬಾಲಿವುಡ್‍ನ ಜನಪ್ರಿಯ ತಾರೆಯರ ಸಿನಿಮಾಗಳು ಒಂದೇ ವಾರ (ಒಂದೇ ದಿನ) ಬಿಡುಗಡೆಯಾದರೆ ಸಿನಿ ರಸಿಕರಿಗೆ ಅದು ಸುಗ್ಗಿ-ಸಂಭ್ರಮ. ಆದರೆ ಇದು ನಟ-ನಟಿಯರಿಗೆ ಪ್ರತಿಷ್ಠೆಯ ಪ್ರಶ್ನೆ. ಬಂಡವಾಳ ಹಾಕಿದ ನಿರ್ಮಾಪಕರ ಎದೆಯಲ್ಲಿ ಢವಢವ! ದೊಡ್ಡ ತಾರೆಯರ ನಡುವೆ ಇದು ತಾರಾ ಸಮರಕ್ಕೂ ಕಾರಣವಾಗುತ್ತದೆ. ಕೆಲವೊಮ್ಮೆ ಚಿತ್ರತಂಡಗಳ ಪರಸ್ಪರ ಹೊಂದಾಣಿಕೆಯಿಂದಾಗಿ ಇಂಥ ಸ್ಟಾರ್‍ವಾರ್‍ಗಳು ತಪ್ಪುತ್ತವೆ. ಇಂಥ ಸುದ್ದಿಯೊಂದು ಬಿ-ಟೌನ್‍ನಿಂದ ಬಂದಿದೆ. ಪ್ರತಿಭಾವಂತ ನಟಿ ವಿದ್ಯಾ ಬಾಲನ್ ನಟಿಸಿರುವ ಕಹಾನಿ 2 : ದುರ್ಗಾ ರಾಣಿ ಸಿಂಗ್ ಹಾಗೂ ಭರವಸೆಯ ತಾರೆ ಅಲಿಯಾ ಭಟ್ ಅಭಿನಯದ ಡಿಯರ್ ಜಿಂದಗಿ ಒಂದೇ ದಿನ ತೆರೆಕಂಡು ಗಲ್ಲಾ ಪೆಟ್ಟಿಗೆಯಲ್ಲಿ ಘರ್ಷಣೆಯಾಗುವ ಆತಂಕತ್ತು.

ಆದರೆ ಕಹಾನಿ 2 :

ದುರ್ಗಾ ರಾಣಿ ಸಿಂಗ್ ಚಿತ್ರವನ್ನು ನವೆಂಬರ್ 25ರ ಬದಲಿಗೆ ಡಿಸೆಂಬರ್ 2ರಂದು ರಿಲೀಸ್ ಮಾಡಲು ಸಿನಿಮಾ ಟೀಂ ಸಮ್ಮತಿಸಿದೆ. ಬಾಕ್ಸ್ ಆಫೀಸ್‍ನಲ್ಲಿ ವಿನಾಕಾರಣ ಕ್ಲಾಶ್ ಆಗುವುದನ್ನು ತಪ್ಪಿಸಲು ಪೆನ್ ಇಂಡಿಯಾದ ನಿರ್ಮಾಪಕ ಜಯಂತಿಲಾಲ್ ಗದಾ ಕಹಾನಿ-2 ಅನ್ನು ಡಿಸೆಂಬರ್ ಮೊದಲ ವಾರಕ್ಕೆ ಮುಂದೂಡಿದ್ದಾರೆ.ಭಟ್ ಸಾಹೇಬ್ (ಮಹೇಶ್ ಭಟ್) ಅವರು ನಮ್ಮೊಂದಿಗೆ ಉಡಾನ್ ಮತ್ತು ನಾಮಕರಣ್ ಟಿ ಶೋಗಳಲ್ಲಿ ಕಾರ್ಯನಿರ್ವಸಿದ್ದಾರೆ. ಮಿಗಿಲಾಗಿ ಅವರು ಮತ್ತು ಅಲಿಯಾ ನಮ್ಮ ಕುಟುಂಬದ ಸದಸ್ಯರಿದ್ದಂತೆ. ನಮ್ಮ ಕುಟುಂಬದೊಳಗೆ ಯಾವುದೇ ರೀತಿಯ ಸ್ಪರ್ಧೆ ಇರಬಾರದು. ಇದೇ ಕಾರಣಕ್ಕಾಗಿ ನಮ್ಮ ಸಿನಿಮಾವನ್ನು ಡಿಸೆಂಬರ್ 2ರಂದು ಬಿಡುಗಡೆ ಮಾಡಲಿದ್ದೇವೆ ಎಂದು ಜಯಂತಿಲಾಲ್ ಹೇಳಿದ್ದಾರೆ2012ರಲ್ಲಿ ಸೂಪರ್‍ಹಿಟ್ ಆಗಿದ್ದ ಥ್ರಿಲ್ಲರ್ ಡ್ರಾಮಾ ಕಹಾನಿಯ ಮುಂದುವರಿದ ಭಾಗ ಇದಾಗಿದೆ. ವಿದ್ಯಾಬಾಲನ್ ಪ್ರಧಾನ ಭೂಮಿಕೆಯಲ್ಲಿದ್ದು, ಅರ್ಜುನ್ ರಾಂಪಾಲ್ ಚಿತ್ರದ ನಾಯಕ. ಡಿಯರ್ ಜಿಂದಗಿ ನವೆಂಬರ್ 25ರಂದು ತೆರೆ ಕಾಣಲಿದ್ದು, ಶಾರುಕ್ ಖಾನ್, ಅಲಿಯಾ ಭಟ್, ಅದಿತ್ಯ ರಾಯ್, ಕುನಾಲ್ ಕಪೂರ್, ಅಂಗದಾ ಬೇಡಿ ನಟಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin