ಮದುವೆ ಮಂಟಪದಲ್ಲಿ ತಾಂಬೂಲದ ಬದಲು ಸಸಿಗಳನ್ನು ನೀಡಿ ಪರಿಸರ ಪ್ರಜ್ಞೆ ಮೆರೆದ ನವಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Marriage01 ಚಿಕ್ಕಮಗಳೂರು, ಅ.20– ಮದುವೆ ಮಂಟಪದಲ್ಲಿ ಬಂಧುಗಳಿಗೆ ತಾಂಬೂಲದ ಬದಲು ಸಸಿಗಳನ್ನು ನೀಡುವ ಮೂಲಕ ಪರಿಸರ ಪ್ರಜ್ಞೆ ಮೆರೆದ ಅಪರೂಪದ ಪ್ರಸಂಗ ನಗರ ಹೊರ ವಲಯದ ಬಂಟರ ಭವನದಲ್ಲಿ ನಡೆಯಿತು.  ಮೂಡಿಗೆರೆ ತಾಲ್ಲೂಕು, ಗೌಡಳ್ಳಿಯ ಜಿ.ಹೆಚ್. ಮನವಿ ಹಾಗೂ ಬೇಲೂರು ತಾಲ್ಲೂಕು ಕಲ್ಲಳ್ಳಿಯ ಕೆ.ಎಂ. ನಾಗೇಶ್ ದಂಪತಿ ತಮ್ಮ ವಿವಾಹದ ವೇಳೆ ಪರಿಸರ ಕಾಳಜಿ ಮೆರೆಯುವ ಮೂಲಕ ಸಮಾಜಕ್ಕೆ ಮಾದರಿಯಾದರು.  ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಜಿ.ಹೆಚ್. ಮನವಿ ಮತ್ತು ಹಾಸನ ಜಿಲ್ಲೆ ಬೈರಾಪುರದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎಂ. ನಾಗೇಶ್ ಅವರ ವಿವಾಹ ಇತ್ತೀಚೆಗೆ ನಿಷ್ಕರ್ಶೆಯಾಯಿತು.

Marriage02

ಮೂಲತ: ಪರಿಸರ ಪ್ರೇಮಿಯಾಗಿರುವ ನಾಗೇಶ್ ತಮ್ಮ ಬಾಳ ಸಂಗಾತಿಯೊಂದಿಗೆ ಚರ್ಚಿಸಿ ವಿವಾಹದ ವೇಳೆ ಸಸಿಗಳನ್ನು ವಿತರಿಸಿ ಪರಿಸರ ಪ್ರಜ್ಞೆ ಮೂಡಿಸುವ ತಮ್ಮ ಇಂಗಿತವನ್ನು ಆಕೆಗೆ ತಿಳಿಸಿದರು. ವಧುವಿನಿಂದ ಸಹಮತ ದೊರೆತ ಕೂಡಲೇ ನಾಗೇಶ್ ದಾವಣಗೆರೆಯ ತಮ್ಮ ಸ್ನೇಹಿತ ಗಿರೀಶ್ ಅವರ ಎನ್‍ವಿರೋಫ್ರೆಂಡ್ ಸಂಸ್ಥೆಯಿಂದ ಎಂಬತ್ತು ಸಾವಿರಕ್ಕೂ ಅಧಿಕ ಮೌಲ್ಯದ ಎರಡು ಸಾವಿರ ಸಸಿಗಳನ್ನು ಖರೀದಿಸಿದರು.  ಮದುವೆ ಮಂಟಪದಲ್ಲಿ ನವದಂಪತಿ ಉಡುಗೊರೆ ನೀಡಲು ಬಂದ ಬಂಧುಗಳಿಗೆ, ಸ್ನೇಹಿತರಿಗೆ ಅಪರೂಪದ ಸಸಿಗಳಾದ ರಕ್ತ ಚಂದನ, ಅಮೃತಬಳ್ಳಿ, ಬಿಲ್ವಪತ್ರೆ, ಬನ್ನಿ ಪತ್ರೆ, ಪೇರಲೆ, ಬೇವು, ಕರಿಬೇವು ಸೇರಿದಂತೆ ಆಯುರ್ವೇದ ಮತ್ತು ವಿವಿಧ ಜಾತಿಯ ಹಣ್ಣು, ಹೂವುಗಳ ಸಸಿಗಳನ್ನು ತಾಂಬೂಲದ ಬದಲಿಗೆ ನೀಡುವ ಮೂಲಕ ಪರಿಸರ ಉಳಿಸಿ ಬೆಳೆಸುವಂತೆ ಮನವಿ ಮಾಡಿದರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ವರ ನಾಗೇಶ್, ಮುಂದಿನ ಪೀಳಿಗೆಗೆ ಸುಂದರ ಮತ್ತು ಸ್ವಾಸ್ತ್ಯ ಪರಿಸರವನ್ನು ಉಳಿಸುವುದು ಎಲ್ಲರ ಹೊಣೆಯಾಗಿದ್ದು, ತಮ್ಮ ಮನೆಗಳಲ್ಲಿ ನಡೆಯುವ ಸಮಾರಂಭದ ವೇಳೆ ಸಸಿ ವಿತರಿಸುವುದು ಸೇರಿದಂತೆ ಪರಿಸರ ಪ್ರಜ್ಞೆ  ಮೂಡಿಸುವ ಕೆಲಸ ಎಲ್ಲೆಡೆ ಇಂದು ಆಗಬೇಕಾಗಿದೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin