ಮೈಸೂರಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Mysuru-01

ಮೈಸೂರು,ಅ.20-ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಲಾಗುವುದು ಎಂದು ಮೇಯರ್ ಬೈರಪ್ಪ ತಿಳಿಸಿದ್ದಾರೆ. ನಗರದ ವಿದ್ಯಾರಣ್ಯಾಪುರ ಮತ್ತು ಕೆಸರೇ ಪ್ರದೇಶಗಳಲ್ಲಿ ಆರಂಭಿಸಲಾಗುವ ಈ ಘಟಕಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ಟೋಬರ್ 28ರಂದು ಶಿಲ್ಯಾನ್ಯಾಸ ನೆರವೇರಿಸುವರು ಎಂದು ಭೈರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಮೂರು ಕಂಪನಿಗಳು ಮಾತ್ರ ಟೆಂಡರ್ ಸಲ್ಲಿಸಿದ್ದವು ಮತ್ತು ತ್ಯಾಜ್ಯ ವಿಲೇವಾರಿ ಅವಧಿಯನ್ನು 5ರಿಂದ 30 ವರ್ಷಗಳಿಗೆ ವಿಸ್ತರಿಸಲು ಗುತ್ತಿಗೆದಾರರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಎರಡೂ ಘಟಕಗಳು ತಲಾ 400 ಟನ್ ತ್ಯಾಜ್ಯ ಸಾಮಥ್ರ್ಯ ಹೊಂದಿವೆ ಎಂದರು.

ನಗರದಲ್ಲಿ ಬೀದಿದೀಪದ ಕಂಬಗಳಿಗೆ ಎಲ್‍ಇಡಿ ಬಲ್ಪ್ ಅಳವಡಿಸುವ ಪ್ರಸ್ತಾವನೆ ರಾಜ್ಯ ಸಚಿವ ಸಂಪುಟದ ಮುಂದಿದೆ. ಸಂಪುಟ ಒಪ್ಪಿಗೆ ಕೊಟ್ಟರೆ ಎಲ್ಲ ಕಂಬಗಳಿಗೂ ಎಲ್‍ಇಡಿ ಬಲ್ಪ್ ಅಳವಡಿಸಲಾಗುವುದು ಎಂದು ಬೈರಪ್ಪ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin