ರೈಲಿಗೆ ತಲೆಕೊಟ್ಟು ಪ್ರೇಮಿಗಳ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide-01

ಬೆಂಗಳೂರು, ಅ.20- ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹದೇವಪುರ ಬಳಿಯ ಕಾವೇರಿನಗರದ ಬಳಿ ನಡೆದಿದೆ. ರೇಖಾ ಹಾಗೂ ಸಂಜಯ್ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಕಾವೇರಿನಗರದ ನಿವಾಸಿಯಾದ ರೇಖಾಗೆ ಇತ್ತೀಚೆಗೆ ನಿಶ್ಚಿತಾರ್ಥವಾಗಿತ್ತು. ಇದು ಈಕೆಗೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ.
ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಯಾದ ರೇಖಾ ತನ್ನ ಸಹಪಾಠಿ ಸಂಜಯ್‍ನನ್ನು ಪ್ರೀತಿಸುತ್ತಿದ್ದಳು. ಆದರೆ, ಇದು ಆಕೆಯ ಮನೆಯವರಿಗೆ ಕಳೆದೆರಡು ದಿನದ ಹಿಂದೆ ತಿಳಿದು ಆತಂಕಗೊಂಡಿದ್ದರು. ಮನೆಯವರ ಮಾತಿನಿಂದ ದುಡುಕಿದ ಈಕೆ ಕಳೆದ ರಾತ್ರಿ ತನ್ನ ಪ್ರಿಯಕರನಿಗೆ ಕರೆ ಮಾಡಿ ಮಹದೇವಪುರಕ್ಕೆ ಕರೆಸಿಕೊಂಡು ನಂತರ ಒಟ್ಟಾಗಿ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin