ಸ್ಟ್ರಾಂಗ್ ರೂಂ ಸೇರಿದ ರತ್ನಖಚಿತ ಸಿಂಹಾಸನ

ಈ ಸುದ್ದಿಯನ್ನು ಶೇರ್ ಮಾಡಿ

mysore

ಮೈಸೂರು, ಅ.20-ವಿಶ್ವವಿಖ್ಯಾತ ದಸರಾ ಸಂದರ್ಭದಲ್ಲಿ ಖಾಸಗಿ ದರ್ಬಾರ್‍ಗಾಗಿ ಹೊರ ತೆಗೆಸಿದ್ದ ರತ್ನಖಚಿತ ಸಿಂಹಾಸನವನ್ನು ರಾಜಮಾತೆ ಪ್ರಮೋದದೇವಿ ಒಡೆಯರ್ ಮಾರ್ಗದರ್ಶನದಲ್ಲಿ ವಿಸರ್ಜಿಸಿ ಭದ್ರತಾ ಕೊಠಡಿಗೆ ಅರಮನೆ ಸಿಬ್ಬಂದಿ ಸಾಗಿಸಿದರು. ಸೆ.25ರಂದು ಸಿಂಹಾಸನ ಮತ್ತು ಬೆಳ್ಳಿ ಭದ್ರಾಸನ ನಡೆದಿತ್ತು. 25 ದಿನಗಳ ನಂತರ ಈ ರತ್ನಖಚಿತ ಸಿಂಹಾಸನವನ್ನು ಯಶಸ್ವಿಯಾಗಿ ಸ್ಟ್ರಾಂಗ್ ರೂಂಗೆ ಸೇರಿಸಲಾಯಿತು.  ಇದುವರೆಗೆ ಅಮರನೆಯ ದರ್ಬಾರ್‍ಹಾಲ್‍ನಲ್ಲಿ ಸಿಂಹಾಸನವನ್ನು ಇಡಲಾಗಿತ್ತು. ವರ್ಷಕ್ಕೊಮ್ಮೆ ದಸರಾ ಸಂದರ್ಭದಲ್ಲಿ ಮಾತ್ರ ಖಾಸಗಿ ದರ್ಬಾರ್ ವೇಳೆ ಈ ಅಪೂರ್ವ ಸಿಂಹಾಸನವನ್ನು ಹೊರ ತೆಗೆಯಲಾಗುತ್ತದೆ.ದಸರಾ ನಂತರ ಸಾರ್ವಜನಿಕರಿಗೆ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಈ ಬಾರಿ ಸಾರ್ವಜನಿಕರಿಗೆ ದರುಶನ ಭಾಗ್ಯ ಸರಿಯಾಗಿ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin