ಪಶು ಆಸ್ಪತ್ರೆಯ ಮೇಲ್ವಿಚಾರಕ ನೀಡಿದ ಮಾತ್ರೆ ತಿಂದ 30 ಕುರಿಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Goat-Deada

ಮಳವಳ್ಳಿ, ಅ.21- ಮೇಕೆಗಳಿಗೆ ಶೀತ ನಗಡಿಗೆ ಪಶು ಆಸ್ಪತ್ರೆಯ ಮೇಲ್ವಿಚಾರಕ ನೀಡಿದ ಮಾತ್ರೆಯಿಂದ 30 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಜರುಗಿದೆ. ಮಹಾದೇವಮ್ಮ ಎಂಬುವರಿಗೆ ಸೇರಿದ ಮೇಕೆಮಂದೆಗೆ ಮೊನ್ನೆ ಇದ್ದಕ್ಕಿದ್ದಂತೆ ಶೀತನಗೆಡಿ ಕಾಣಿಸಿಕೊಂಡು, ಮೇಕೆಗಳಲ್ಲಾ ಶೀನಲು ಆರಂಭಿಸಿದವು ಎನ್ನಲಾಗಿದೆ. ಇಡೀ ಮೇಕೆ ಮಂದೆಯೇ ಶೀತಭಾದೆಯಿಂದ ಬಳಲುತ್ತಿರುವುದರಿಂದ ಗಾಬರಿಗೊಳಗಾದ ಮಹಾದೇವಮ್ಮ ಅವರು ಹಲಗೂರಿನ ಪಶು ಆಸ್ಪತ್ರೆಗೆ ಧಾವಿಸಿ ವಿಷಯ ಮುಟ್ಟಿಸಿದ್ದಾರೆ.
ಅದರಂತೆ ಮಹಾದೇವಮ್ಮ ಅವರ ಮನವಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪಶು ಆಸ್ಪತ್ರೆಯ ಮೇಲ್ವಿಚಾರಕರೊಬ್ಬರು ಮೇಕೆಗಳಿಗೆಲ್ಲಾ ಶೀತ ನಿವಾರಣೆಗೆ ಚುಚ್ಚುಮದ್ದು ನೀಡಿದರಂತೆ. ಆದರೆ ಚುಚ್ಚು ಮದ್ದು ನೀಡಿದ ನಂತರ ಅಸ್ವಸ್ಥೆತೆಗೆ ಒಳಗಾದ ಮೇಕೆಗಳು ಒದ್ದಾಡಿ ಪ್ರಾಣ ಬಿಡಲು ಆರಂಭಿಸಿದ್ದು , ಬೆಳಿಗ್ಗೆಯೊತ್ತಿಗೆ 5 ಮೇಕೆಗಳು ಸಾವನ್ನಪ್ಪಿದ್ದರೆ, ಸಂಜೆಯೊತ್ತಿಗೆ 10 ಮೇಕೆಗಳು ಸಾವನ್ನಪ್ಪಿದ್ದವು ಎಂದು ವರದಿಯಾಗಿದೆ.

ಮಹಾದೇವಮ್ಮ ಅವರ ಮೇಕೆಮಂದೆಯಲ್ಲಿ ಒಟ್ಟು 50 ಮೇಕೆಗಳು ಇದ್ದು ಈಗಲೂ ಸಹ ಮೇಕೆಗಳ ಸಾವಿನ ಸರಣಿ ಮುಂದುವರಿದಿದ್ದು ಶೀತಕ್ಕೆ ನೀಡಿದ ಔಷಧ ಮೇಕೆಗಳ ಸರಣಿ ಸಾವಿನಲ್ಲಿ ಅಂತ್ಯವಾಗುತ್ತಿದೆ. 30 ಮೇಕೆಗಳ ಸಾವಿನಿಂದ ಮಹಾದೇವಮ್ಮ ಅವರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಪಶು ಸಂಗೋಪನ ಇಲಾಖೆಯ ಜಿಲ್ಲಾ ಉಪ ನಿರ್ಧೇಶಕರು ಹಾಗೂ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಪರಮೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳಿದಿರುವ ಎಲ್ಲಾ ಮೇಕೆಗಳಿಗೂ ಸೂಕ್ತ ಚಿಕಿತ್ಸೆ ನೀಡಿದ್ದು ಅವುಗಳಿಗೆ ಯಾವುದೇ ಪ್ರಾಣಪಾಯವಾಗದಂತೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಡಾ. ಪರಮೇಶ್ ತಿಳಿಸಿದ್ದಾರೆ. ಅಲ್ಲದೆ ಮೃತ ಮೆಕೆಗಳ ರಕ್ತ ಇನ್ನಿತರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬಂದ ನಂತರವಷ್ಟೇ ಮೇಕೆಗಳ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin