ಬೇಕರಿಯ ಮೇಲ್ಛಾವಣಿ ಶೀಟ್ ತೆಗೆದು ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

thifte

ಬೆಂಗಳೂರು,ಅ.21-ಬೇಕರಿಯೊಂದರ ಮೇಲ್ಛಾವಣಿ ಶೀಟ್ ತೆಗೆದು ಒಳನುಗ್ಗಿದ ಕಳ್ಳರು ಹಣ ಹಾಗೂ ಇನ್ನಿತರೆ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು ಪೂರ್ವ ತಾಲ್ಲೂಕಿನ ಚೀಮಸಂದ್ರಗೇಟ್ ಬಳಿ ಹಿಮಾಲಯ ಬೇಕರಿ ಇದೆ. ರಾತ್ರಿ ಈ ಬೇಕರಿಯ ಶೀಟ್ ತೆಗೆದು ಒಳನುಗ್ಗಿದ ಕಳ್ಳರು ಡ್ರಾನಲ್ಲಿದ್ದ ಹಣ, ಬೇಕರಿ ತಿನಿಸು, ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿ ಹೋಗುವಾಗ ಬೇಕರಿ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಹಾರ್ಡ್ ಡಿಸ್ಕ್‍ನ್ನು ಕದ್ದೊಯ್ದಿದ್ದಾರೆ. ಇಂದು ಬೆಳಗ್ಗೆ ಅಂಗಡಿ ಮಾಲೀಕ ಬಾಗಿಲು ತೆರೆದಾಗಲೇ ಕಳ್ಳತನ ನಡೆದಿರುವುದು ಗೊತ್ತಾಗಿ ತಕ್ಷಣ ಆವಲಹಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin