ಲಾರಿ ಡಿಕ್ಕಿ : ಶಾಲಾ ಕೊಠಡಿ ಗೋಡೆ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

ಕೆಜಿಎಫ್, ಅ.21- ಲಾರಿಯನ್ನು ಹಿಂದಕ್ಕೆ ತೆಗೆಯಲು ಹೋಗಿ ಶಾಲಾ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಕೊಠಡಿ ಗೋಡೆ ಕುಸಿದು ಹಾನಿಯಾಗಿರುವ ಘಟನೆ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿಚ್ಚಹಳ್ಳಿ ಗ್ರಾಮದ ನಿವಾಸಿ ಲಾರಿ ಚಾಲಕ ಸುರೇಶ್ ಲಾರಿಯನ್ನು ಹಿಂದಕ್ಕೆ ತೆಗೆಯುವಾಗಿ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲಾ ಕೊಠಡಿ ಗೋಡೆಗೆ ಡಿಕ್ಕಿ ಹೊಡೆದು ಕೊಠಡಿ ಗೋಡೆ ಕುಸಿದು ಮೇಲ್ಛಾವಣಿ ಶೀಥಲಗೊಂಡು ಸುಮಾರು ಒಂದು ಲಕ್ಷ ಮೌಲ್ಯ ಆಸ್ತಿ ನಷ್ಟವಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯನಿ ಮಂಗಳಗೌರಿ ಉರಿಗಾಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin