ಕೆ.ಆರ್.ಮಾರುಕಟ್ಟೆಗೆ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ : ಮೇಯರ್ ಪದ್ಮಾವತಿ

ಈ ಸುದ್ದಿಯನ್ನು ಶೇರ್ ಮಾಡಿ

Padmavathi-1
ಬೆಂಗಳೂರು, ಅ.22-ಕೆ.ಆರ್.ಮಾರುಕಟ್ಟೆಯ ಸಮಗ್ರ ಅಭಿವೃದ್ಧಿಗೆ 28 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲ್ಯಾನ್ ಸಿದ್ಧಗೊಳಿಸಲಾಗಿದೆ ಎಂದು ಮೇಯರ್ ಪದ್ಮಾವತಿ ಇಂದಿಲ್ಲಿ ತಿಳಿಸಿದರು. ಶಾಸಕ ಜಮೀರ್ ಅಹಮದ್‍ಖಾನ್, ಆಯುಕ್ತ ಮಂಜುನಾಥ ಪ್ರಸಾದ್ ಮತ್ತಿತರ ಅಧಿಕಾರಿಗಳೊಂದಿಗೆ ಕೆ.ಆರ್.ಮಾರುಕಟ್ಟೆಗೆ ತೆರಳಿ ಅಲ್ಲಿನ ಸ್ವಚ್ಛತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ವಾರ ಮಾರುಕಟ್ಟೆಗೆ ಭೇಟಿ ನೀಡಿದಾಗ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ವ್ಯಾಪಾರಿಗಳು ಹಾಗೂ ಬಿಬಿಎಂಪಿ ಸಿಬ್ಬಂದಿಗೆ ನಾನು ಸೂಚನೆ ನೀಡಿದ್ದೆ. ಇಂದು ಬಂದು ನೋಡಿದಾಗ ಶೇ.40ರಷ್ಟು ಸ್ವಚ್ಛತೆ ಕಾಪಾಡಿರುವುದು ಕಂಡು ಬಂದಿದೆ ಎಂದರು.

Padmavathi-2

ಸುರಂಗಮಾರ್ಗದಲ್ಲಿ ಲೈಟ್ ಹಾಕಿದ್ದಾರೆ. ಕಂಡಕಂಡಲ್ಲಿ ಕಸ ಸುರಿದಿಲ್ಲ. ಇದೊಂದು ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು. ಒಟ್ಟಾರೆ ಕೆ.ಆರ್.ಮಾರುಕಟ್ಟೆ ಸಮಗ್ರ ಅಭಿವೃದ್ಧಿಗೆ ನಮ್ಮ ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದ್ದಾರೆ. ಮುಂದಿನ ವಾರ ಯೋಜನೆಯ ಪ್ರಾತ್ಯಕ್ಷಿಕೆ ವೀಕ್ಷಿಸಿ ಅದಕ್ಕೆ ಸರ್ಕಾರದ ಅನುಮೋದನೆ ಪಡೆದುಕೊಂಡು ಮಾಸ್ಟರ್ ಪ್ಲ್ಯಾನ್ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಾರುಕಟ್ಟೆ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ಬಿಬಿಎಂಪಿ ಅಧಿಕಾರಿಗಳು ಹಾಗೂ ಮಾರುಕಟ್ಟೆ ವ್ಯಾಪಾರಿಗಳನ್ನೊಳಗೊಂಡ ಸಮಿತಿ ರಚಿಸುತ್ತೇವೆ. ಆ ಸಮಿತಿ ಸದಸ್ಯರು ಪ್ರತಿನಿತ್ಯ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಯಾರೇ ಕಸ ಹಾಕಿದರೂ ಅವರು ಅಲ್ಲೆಲ್ಲೂ ಕಸ ಹಾಕದಂತೆ ಮನವೊಲಿಸಿ ಎಲ್ಲ ಕಸವನ್ನು ಒಂದೆಡೆ ಶೇಖರಿಸಿಡುತ್ತಾರ. ಪಾಲಿಕೆಯಿಂದ ನಿಯೋಜಿಸಲಾಗಿರುವ ಸೀಜರ್ಸ್‍ಗಳು ಕಸವಿಲೇವಾರಿ ಘಟಕಕ್ಕೆ ಇದನ್ನೆಲ್ಲ ಸಾಗಿಸುತ್ತಾರೆ. ಇನ್ನು ಮುಂದೆ ಶುಚಿತ್ವ ಕಾಪಾಡಿಕೊಳ್ಳಲು ಅಧಿಕಾರಿಗಳು ಆದ್ಯತೆ ನೀಡುತ್ತಾರೆ ಎಂದು ವಿವರಿಸಿದರು.

Padmavathi-3

ನಮ್ಮ ಈ ಕಾರ್ಯದಲ್ಲಿ ವ್ಯಾಪಾರಿಗಳು ಕೈ ಜೋಡಿಸಬೇಕು. ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿ ಎಲ್ಲೆಂದರಲ್ಲಿ ವ್ಯಾಪಾರ ಮಾಡುವವರಿಗೆ ಕಡಿವಾಣ ಹಾಕಿ, ಶಿಸ್ತುಬದ್ಧ ವ್ಯಾಪಾರ ಮಾಡಿದರೆ ಮಾರುಕಟ್ಟೆಗೆ ಹೆಚ್ಚು ಗ್ರಾಹಕರೂ ಬರುತ್ತಾರೆ, ಮಾರುಕಟ್ಟೆ ಆವರಣವೂ ಶುಚಿಯಾಗಿರುತ್ತದೆ. ಇದು ಹೆಮ್ಮೆಯ ಮಾರುಕಟ್ಟೆ ಎಂದು ಪದ್ಮಾವತಿ ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin