ಕ್ಯಾಮರೂನ್ ರೈಲು ದುರಂತದಲ್ಲಿ 72 ಕ್ಕೂ ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Train

ಕ್ಯಾಮರೂನ್ ಅ.22 : ಕ್ಯಾಮರೂನ್’ನ ನಗರಗಳಾದ ಯೋನಡೇ ಹಾಗೂ ದೌಲಾಲ್ ನಡುವೆ ಪ್ರಯಾಣಿಸುತ್ತಿದ್ದ ರೈಲೊಂದು ಎಸೆಕಾ ಬಳಿ ಹಳಿ ತಪ್ಪಿದ ಪರಿಣಾಮ 72 ಮಂದಿ ಸಾವನ್ನಪ್ಪಿದ್ದು 300 ಜನರಿಗೆ ಗಂಭೀರ ಗಾಯಗಳಾಗಿವೆ. 1300 ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ಈ ರೈಲಿನಲ್ಲಿ 600 ಮಂದಿ ಮಾತ್ರ ಪ್ರಯಾಣಿಸುತ್ತಿದ್ದರು. ಈ ನಡುವೆ ಕ್ಯಾಮರೂನ್ ದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಭೂಕುಸಿತದಿಂದಾಗಿ ಈ ಅವಘಡ ಸಂಭವಿಸಿದೆ. ಈ ದುರ್ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಅಲೈನ್ ಮೆಬೇ ಎಂದು 300ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin